ಗುರುಗ್ರಾಮ:
ಸಾಮಾಜಿಕ ಜಾಲತಾಣಗಳಲ್ಲಿ ಎದುರಾದ ಆಕ್ರೋಶದ ಬೆನ್ನಲ್ಲೆ ಸ್ಪಷ್ಟನೆ ನೀಡಿರುವ ಝೆಪ್ಟೊ, ತಾಂತ್ರಿಕ ದೋಷದ ಕಾರಣದಿಂದ ಈ ಅಚಾತುರ್ಯ ನಡೆದಿದೆ ಎಂದು ಹೇಳಿದ್ದು ತಕ್ಷಣವೇ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದೆ.ಗುರುಗ್ರಾಮದ ಓರ್ವ ಗ್ರಾಹಕ 100 ಗ್ರಾಮ್ ಕೊತ್ತಂಬರಿ ಸೊಪ್ಪಿಗೆ 131 ರೂಪಾಯಿ ಬೆಲೆ ನಿಗದಿಪಡಿಸಿರುವುದನ್ನು ಗಮನಿಸಿ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.
ಹಲವಾರು ನೆಟಿಜನ್‌ಗಳು ಆಕ್ರೋಶ ಮತ್ತು ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಪ್ಲಾಟ್‌ಫಾರ್ಮ್‌ನಲ್ಲಿನ ಅತಿಯಾದ ಬೆಲೆಗಳು ಹೇಗೆ ರಸ್ತೆಬದಿಯ ತರಕಾರಿ ಮಾರಾಟಗಾರರು ಖರೀದಿದಾರರನ್ನು ಓಲೈಸಲು ತರಕಾರಿಗಳೊಂದಿಗೆ ಉಚಿತ ಕೊತ್ತಂಬರಿ ಸೊಪ್ಪನ್ನು ನೀಡಲು ಮುಂದಾಗುತ್ತಿರುವುದು ಹೇಗೆ ವ್ಯತಿರಿಕ್ತವಾಗಿದೆ ಎಂಬುದನ್ನು ಹೇಳಿದ್ದಾರೆ.”ಬಹುಶಃ ಇದು ಚಂದ್ರನ ಮಣ್ಣಿನಲ್ಲಿ ಬೆಳೆದಿದೆಯೇ?” ಎಕ್ಸ್‌ನಲ್ಲಿ ಓರ್ವ ನೆಟಿಜನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ತನ್ನ ಪ್ರತಿಕ್ರಿಯೆಯಲ್ಲಿ, ತಾಂತ್ರಿಕ ದೋಷದಿಂದಾಗಿ ಈ ರೀತಿಯಾಗಿದ್ದು ಗ್ರಾಹಕರ ಕಾಳಜಿಯನ್ನು ತ್ವರಿತವಾಗಿ ಬಗೆಹರಿಸಲು ಕಂಪನಿ ಬದ್ಧವಾಗಿದೆ ಎಂದು Zepto ಹೇಳಿದೆ.








