ಕೊರೊನಾ ಸೋಂಕಿತರಿಗೆ ಬೆಡ್​​​ ನೀಡದ 19 ಆಸ್ಪತ್ರೆಗಳ‌ ಲೈಸನ್ಸ್ ರದ್ದು!!

ಬಳ್ಳಾರಿ :

     ಕೋವಿಡ್​​-19 ಸೋಂಕಿತರ ಚಿಕಿತ್ಸೆಗೆ ಬೆಡ್​​​ ನೀಡದೆ ವಾಪಸ್​​ ಕಳುಹಿಸಿದ ಆರೋಪದಡಿ ಬೆಂಗಳೂರಿನಲ್ಲಿ 19 ಖಾಸಗಿ ಆಸ್ಪತ್ರೆಗಳ ಪರವಾನಗಿಯನ್ನು ರದ್ದುಗೊಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ ಹೊರಡಿಸಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

      ಅವರು ಬಳ್ಳಾರಿಯಲ್ಲಿ ಇಂದು ತಮ್ಮನ್ನು ಭೀಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿನ ಶೇ 50 ರಷ್ಟು ಬೆಡ್​​​ಗಳನ್ನು ಮೀಸಲಿರಿಸಬೇಕು ಎಂದು ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಬೆಂಗಳೂರಿನ 19 ಆಸ್ಪತ್ರೆಗಳು ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿವೆ. ಬೆಡ್​​ಗಳ ಲಭ್ಯತೆ ಇದ್ದರೂ ಇಲ್ಲವೆಂದು ಸೋಂಕಿತರನ್ನು ವಾಪಸ್​​ ಕಳುಹಿಸಲಾಗಿದೆ. ಹೀಗಾಗಿ ಬಿಬಿಎಂಪಿ ಅಂತಹ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದುಪಡಿಸಿದೆ ಎಂದು ತಿಳಿಸಿದರು.

     ಐಎಎಸ್ ಅಧಿಕಾರಿ ಹರ್ಷಗುಪ್ತಾ ಹಾಗೂ ಎಡಿಜಿಪಿ ರೂಪಾ ಅವರ ನೇತೃತ್ವದ ತಂಡವು ನಿನ್ನೆ ಸೋಂಕಿತರಿಗೆ ಬೆಡ್​​ಗಳಿದ್ದರೂ ಇಲ್ಲವೆಂದು ಸುಳ್ಳು ಹೇಳಿರುವ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಅದರನ್ವಯ ಮೊದಲ ಹಂತದಲ್ಲಿ 19 ಪರವಾನಗಿ ರದ್ದುಪಡಿಸಲಾಗಿದೆ. ಆಸ್ಪತ್ರೆಗಳ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link