ಶಾಲಾ, ಕಾಲೇಜು ಒಳಗೆ ಅಂತರ, ಹೊರಗೆ ನಿರಂತರ

 ತಿಪಟೂರು  :

      ಕೊರೊನಾ ಹಾವಳಿಯಿಂದ 2020ರ ಮಾರ್ಚ್ ಅಂತ್ಯದಲ್ಲಿ ಮುಚ್ಚಿದ ಶಾಲೆಗಳು, ಜನವರಿ 2021ರ 1ರಿಂದ ಪ್ರಾರಂಭಿಸಲಾಗಿದೆ. ಶಾಲಾ ಕೊಠಡಿಗಳು ಸಂಪೂರ್ಣ ಸ್ಯಾನಿಟೈಜೆಷನ್, ಮಕ್ಕಳಿಗೆ ಸ್ಯಾನಿಟೈಸರ್, ಕೆಲವುಕಡೆ ಮಾಸ್ಕ್‍ಗಳನ್ನು ನೀಡಿ ಶಾಲೆಗೆ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಇನ್ನು ತಮ್ಮ ವಸ್ತುಗಳಾದ ಪೆನ್ನು, ಪೆನ್ಸಿಲ್, ಕುಡಿಯುವ ನೀರು, ಆಹಾರ ಏನನ್ನು ಯಾರಿಂದಲೂ ಪಡೆಯಬೇಡಿ ಮತ್ತು ಕೊಡಬೇಡಿ ಎಂದು ತಿಳಿಸಿದ ಶಿಕ್ಷಕರು, ಮೊದಲೆರಡು ದಿನ ಹೇಗೋ ಶಾಲೆ, ಕಾಲೇಜನ್ನು ಆರಂಭಿಸಿದರು.

      ಶಾಲೆಯ ಒಳಭಾಗದಲ್ಲಿ ಶಿಕ್ಷಕರ ಹೆದರಿಕೆಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶಿಸ್ತಿನಿಂದ ಇರುವ ವಿದ್ಯಾರ್ಥಿಗಳು ಶಾಲೆಯಿಂದ ಹೊರಗಡೆ ಮಾತ್ರಎ ಲ್ಲಾ ಶಿಸ್ತನ್ನು ಮರೆಯುತ್ತಿದ್ದು ಇದು ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

      ಶಿಕ್ಷಕರ ಮಾತಿಗೆ ಹೆದರಿದಂತೆ ಕಾಣುವ ಮಕ್ಕಳು ಶಾಲೆಯ ಒಳಗೆನೋ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಆದರೆ ಇದೇ ವಿದ್ಯಾರ್ಥಿಗಳು ಬಸ್‍ಗಳ ಅಭಾವವಿರುವುದರಿಂದ ಸಿಕ್ಕ ಸಿಕ್ಕ ಆಟೋಗಳಲ್ಲಿ ಕುರಿಗಳನ್ನು ತುಂಬಿದ ಹಾಗೆ ತುಂಬಿಕೊಂಡು ಹೋಗುವ ಆಟೋಚಾಲಕರು ಹೋಗುವುದರಿಂದ ಶಾಲೆಯ ಒಳಗೆ ಇರುವ ಸಾಮಾಜಿಕ ಅಂತರ ಮತ್ತು ಮಾಸ್ಕ್, ಸ್ಯಾನಿಟೈಸರ್ ಬಳಕೆ ಇಲ್ಲದಂತಾಗಿದೆ. ಆದಷ್ಟು ಬೇಗ ವಿದ್ಯಾರ್ಥಿಗಳಿ ಶಾಲಾ ಸಮಯಕ್ಕೆ ಸರಿಯಾಗಿ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್‍ಗಳ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ.

 ರಸ್ತೆ ಬದಿ ವ್ಯಾಪಾರ:

      ಇಷ್ಟು ದಿನ ರಸ್ತೆ ಬದಿಯ ಗೋಬಿ, ಪಾನಿಪುರಿ, ಗೋಲ್‍ಗಪ್ಪ ಅಂಗಡಿ ಹಾಗೂ ಬೇಕರಿಯವರು ವ್ಯಾಪಾರವಿಲ್ಲವೆಂದು ಕೊರಗುತ್ತಿದ್ದರು. ಯಾವಾಗ ಶಾಲೆ ಪ್ರಾರಂಭವಾಯಿತೋ ಈಗ ಎಲ್ಲಾ ಅಂಗಡಿಗಳ ಮುಂದೆಯೂ ವಿದ್ಯಾರ್ಥಿಗಳ ದಂಡು ಕಾಣುತ್ತಿದ್ದು ಭರ್ಜರಿ ವ್ಯಾಪಾರದಲ್ಲಿ ತೊಡಗಿದ್ದಾರೆ.

      ಕೊರೊನಾ ಬಂದಾಗಿನಿಂದ ಬಿಕೋ ಎನ್ನುತ್ತಿದ್ದ ರಸ್ತೆಗಳು ಅನ್‍ಲಾಕ್ ಪ್ರಕ್ರಿಯೆಗೂ ತುಂಬಿರಲಿಲ್ಲ ಆದರೆ ಶಾಲೆ ಪ್ರಾರಂಭವಾದ ದಿನದಿಂದಲೇ ಹುಡುಗರ ಆದಿಯಾಗಿ, ಅಪ್ರಾಪ್ತರು ವಾಹನಗಳನ್ನು ಏರಿ ರಸ್ತೆಗಿಳಿದಿದ್ದಾರೆ.

      ಶಾಲೆಯಲ್ಲಿ ಶಿಕ್ಷಕರು ಎಷ್ಟೇ ಮುತುವರ್ಜಿ ವಹಿಸಿದ್ದರೂ ಮನೆಗಳಲ್ಲಿ ಕೊರೊನಾದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿವಹಿಸಿ ಮಕ್ಕಳಿಗೆ ತಿಳಿಹೇಳಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸುವಂತೆ ತಿಳಿಸಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap