ಲಾಕ್ ಡೌನ್ ನಡುವೆಯೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ

 ಮಿಡಿಗೇಶಿ : 

      ಲಾಕ್ ಡೌನ್ ನಡುವೆಯೂ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿ ಕೇಂದ್ರದಲ್ಲಿ ಎರಡನೆಯ ಕೊರೋನಾ ಎಂಬ ಮಹಾಮಾರಿಯ ಅಬ್ಬರಕ್ಕೆ ಮಿಡಿಗೇಶಿ ಗ್ರಾಮವೊಂದರಿಂದಲೇ ಇಲ್ಲಿಯವರೆಗೆ ಎಂಟು ಜನರು ಬಲಿಯಾಗಿರುವ ಬಗ್ಗೆ ವರದಿಯಾಗಿದೆ.

      ಸೋಂಕಿತರ ಸಂಖ್ಯೆ ಕಡಿಮೆಯಾಗದಿರುವುದು ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ 2014 ಜನರಿಗೆ ಸೋಂಕು ದೃಢವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿದ್ದ 2292 ಜನರು ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದಾರೆ. ಜಿಲ್ಲೆಯಲ್ಲಿ ಈವರೆವಿಗೆ 79,254 ಜನರು ಕೊರೊನಾ ಪೀಡಿತರಾಗಿದ್ದು, ಅವರಲ್ಲಿ ಈವರೆವಿಗೆ 60,726 ಜನರು ಗುಣಮುಖರಾಗಿ, 756 ಜನರನ್ನು ಮಹಾಮಾರಿ ಬಲಿ ತೆಗೆದುಕೊಂಡಿದೆ. ಜಿಲ್ಲಾ ಆಸ್ಪತ್ರೆ ಐ.ಸಿ.ಯು. ನಲ್ಲಿ ಚಿಕಿತ್ಸೆಗೆ ದಾಖಲಾದ ಬಹುತೇಕರು ಸಾವನ್ನಪ್ಪಿರುವ ದಾಖಲೆ ಜಿಲ್ಲೆಯ ಜನರನ್ನು ಮತ್ತಷ್ಟು ಆತಂಕಗೊಳಿಸಿದೆ.
ಈಗಾಗಲೇ ಮಧುಗಿರಿ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಹಲವಾರು ಮಂದಿ ಕೊರೊನಾ ಪಾಸಿಟಿವ್ ದೃಢಪಟ್ಟು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಕೊರಟಗೆರೆ, ತುಮಕೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾಕಷ್ಟು ಪ್ರಕರಣಗಳಲ್ಲಿ ಗುಪ್ತವಾಗಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

      ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಆದ್ಯತೆ ನೀಡಲೆಂಬುದು ನಾಗರಿಕರ ಅಭಿಪ್ರಾಯ. ಜನ ಸಾಮಾನ್ಯರು ಸೋಂಕು ಹರಡುವಿಕೆ ತಡೆಗೆ ಸ್ವಚ್ಛತೆ ಕಾಪಾಡಿ ಎನ್ನುವುದು ಗ್ರಾಮ ಪಂಚಾಯಿತಿಯ ಹಿತನುಡಿಗಳು. ಜಿಲ್ಲೆಯ ಹಲವಾರು ತಾಲ್ಲೂಕುಗಳಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ಸಹ ಮಧುಗಿರಿ ತಾಲ್ಲೂಕಿನ ಪೋಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯವರು ನಮಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಮೌನವಾಗಿರುವ ಒಳ ಮರ್ಮವಾದರೂ ಏನು? ಲಾಕ್‍ಡೌನ್ ನೆಪವು ಪ್ರತಿ ಹಳ್ಳಿಗಳಲ್ಲೂ ಹಗಲಿರುಳೆನ್ನದೆ ಅಕ್ರಮ ಮದ್ಯ ಮಾರಾಟಕ್ಕೆ ಒಳ್ಳೆಯ ಸುವರ್ಣಾವಕಾಶ ಮಾಡಿಕೊಟ್ಟಂತಿದೆ ಎನ್ನುವುದು ಸಾರ್ವಜನಿಕರ ಎಚ್ಚರಿಕೆಯ ಸಂದೇಶವಾಗಿದೆ. ಮಿಡಿಗೇಶಿಯಲ್ಲಿ ಎಂಟತ್ತು ಕಡೆ ಅಕ್ರಮ ಮದ್ಯ ಮಾರಾಟ ನಿರಂತರವಾಗಿ ನಡೆಯುತ್ತಿದ್ದು ತಡೆಯುವ ಅಧಿಕಾರಿಗಳೇ ಇಲ್ಲವೇ? ಇದಕ್ಕೆ ಸಂಬಂಧಿಸಿದವರೆ ಉತ್ತರಿಸಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap