ಜಿಲ್ಲೆಯಲ್ಲಿ ಏರಿಕೆಯಾದ ಕೊರೊನಾ

ತುಮಕೂರು:


 ಒಂದೇ ದಿನ 23 ಹೊಸ ಪ್ರಕರಣ , ಒಂದು ಸಾವು

ಕೋವಿಡ್ ಸೋಂಕು ದಿಢೀರನೇ ಏರಿಕೆಯಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಸೋಮವಾರ 23 ಹೊಸ ಕೋವಿಡ್ ಪ್ರಕರಣಗಳು ಕಂಡುಬಂದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.ಭಾನುವಾರದ ವರದಿಯಲ್ಲಿ ಇಡೀ ಜಿಲ್ಲೆಯಾದ್ಯಂತ 5 ಪ್ರಕರಣಗಳು ಮಾತ್ರ ದಾಖಲಾಗಿದ್ದವು.

ಸೋಮವಾರದ ವರದಿಯಲ್ಲಿ ಜಿಲ್ಲೆಯಾದ್ಯಂತ 23 ಪ್ರಕರಣಗಳು ಕಂಡುಬಂದಿದ್ದು, ತುಮಕೂರು ತಾಲೂಕು ಒಂದರಲ್ಲೇ 18 ಹೊಸ ಪ್ರಕರಣಗಳು ವರದಿಯಾಗಿವೆ.

ಉಳಿದಂತೆ ಗುಬ್ಬಿ 1, ಕುಣಿಗಲ್ 1 ಹಾಗೂ ಮಧುಗಿರಿಯಲ್ಲಿ 3 ಪ್ರಕರಣಗಳು ಕಾಣಿಸಿಕೊಂಡಿವೆ. ಕೋವಿಡ್ ಸೋಂಕಿನಿಂದ ಮಧುಗಿರಿ ತಾಲೂಕಿನ 73 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಜಿಲ್ಲೆಯಲ್ಲಿ 135 ಸಕ್ರಿಯ ಪ್ರಕರಣಗಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap