ಕೊರೊನಾ ಲಸಿಕೆ ಪರಿಣಾಮ ಎಷ್ಟು ದಿನಗಳವರೆಗಿರುತ್ತೆ ಗೊತ್ತಾ..?

    ಕೊರೊನಾ ನಿಯಂತ್ರಣಕ್ಕೆ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಆದ್ರೆ ಕೊರೊನಾ ಲಸಿಕೆ ಪರಿಣಾಮದ ಬಗ್ಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ.

ಸುಮಾರು ಶೇಕಡಾ 30ರಷ್ಟು ಅಂದರೆ ಪ್ರತಿ 10 ಜನರಲ್ಲಿ 3 ಜನರಿಗೆ ಕೊರೊನಾ ಲಸಿಕೆಯ ಪರಿಣಾಮವು ಕೇವಲ 6 ತಿಂಗಳವರೆಗೆ ಇರುತ್ತದೆ.

         ಇದರ ನಂತರ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಿಂದ ಹೊರ ಬಿದ್ದಿದೆ. ಎಐಜಿ ಆಸ್ಪತ್ರೆ ಮತ್ತು ಏಷ್ಯನ್ ಹೆಲ್ತ್ ಕೇರ್, ಹೈದರಾಬಾದ್ ಸಹಯೋಗದಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಸಂಶೋಧನೆಯಲ್ಲಿ 1600ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಈ ಎಲ್ಲಾ ಜನರು ಲಸಿಕೆಯ ಎರಡು ಡೋಸ್ ತೆಗೆದುಕೊಂಡಿದ್ದರು.

ಲಸಿಕೆ ನಂತ್ರ ರೋಗ ನಿರೋಧಕ ಶಕ್ತಿ ಬಗ್ಗೆ ಪರೀಕ್ಷೆ ನಡೆಸುವುದು ಇದ್ರ ಉದ್ದೇಶವಾಗಿತ್ತು. ಅಲ್ಲದೆ ಯಾವ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಅವಶ್ಯಕ ಎಂಬ ಬಗ್ಗೆ ಪತ್ತೆ ಮಾಡುವುದು ಸಂಶೋಧನೆಯ ಉದ್ದೇಶವಾಗಿತ್ತು. ಕೊರೊನಾ ವಿರುದ್ಧ ರೋಗನಿರೋಧಕದ ಮಟ್ಟವು ಪ್ರತಿ ಮಿಲಿಗೆ ಕನಿಷ್ಠ 100 ಎಯು ಆಗಿರಬೇಕು.

ಇದಕ್ಕಿಂತ ಕಡಿಮೆಯಾದರೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವರಲ್ಲಿ 15ಎಯು ಇತ್ತು. ಅಂದ್ರೆ ರೋಗ ನಿರೋಧಕ ಶಕ್ತಿ ಸಂಪೂರ್ಣ ಕಡಿಮೆಯಾಗಿತ್ತು. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 40 ವರ್ಷಕ್ಕಿಂತ ಮೇಲ್ಪಟ್ಟ ಜನರ ರೋಗನಿರೋಧಕ ಶಕ್ತಿ ದುರ್ಬಲಗೊಂಡಿರುವುದು ಕಂಡುಬಂದಿತ್ತು.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link