ಕೋವಿಡ್:
ಮುಖಕ್ಕೆ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಸ್ಯಾನಿಟೈಜರ್ ಬಳಸುವುದನ್ನು ನೀವು ಹಾಗೆಯೇ ಮುಂದುವರೆಸಿದರೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು ಮತ್ತು ನಿಮ್ಮೊಂದಿಗೆ ಇರುವ ಸುತ್ತಮುತ್ತಲಿನ ಜನರ ಆರೋಗ್ಯಕ್ಕೂ ಒಳ್ಳೆಯದು. ಇಂಗ್ಲೆಂಡ್ ನಲ್ಲಿ, ವಿಶೇಷವಾಗಿ ವಯಸ್ಸಾದ ಜನರಲ್ಲಿ ಈ ಕೋವಿಡ್ ಸೋಂಕು ಪ್ರಕರಣಗಳು ಮತ್ತೆ ಹೆಚ್ಚುತ್ತಿದೆ ಎಂದು ಇತ್ತೀಚಿನ ಅಧ್ಯಯನವು ತಿಳಿಸಿದೆ.
ಹಾಗಾದರೆ ಜನವರಿಯಲ್ಲಿ ಹೆಚ್ಚಾಗಿ ಕಂಡು ಬಂದ ಸೋಂಕು ಮತ್ತೆ ಶುರುವಾಗಿದ್ದು ಹೇಗೆ ಮತ್ತು ಇದಕ್ಕೆ ಮುಖ್ಯವಾದ ಕಾರಣಗಳು ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ. ತಜ್ಞರು ಈ ಕೋವಿಡ್ ಸೋಂಕು ಪ್ರಕರಣಗಳು ಮತ್ತೆ ಹೆಚ್ಚಾಗಲು ಎರಡು ಕಾರಣಗಳಿರಬಹುದು ಎಂದು ವಿವರಿಸುತ್ತಾರೆ.
ಸೋಂಕು ಹೆಚ್ಚಾಗಲು 2 ಪ್ರಮುಖ ಕಾರಣಗಳು:
ಮೊದಲನೆಯದಾಗಿ, ಫೆಬ್ರವರಿ ಕೊನೆಯಲ್ಲಿ ಎಲ್ಲಾ ಕೊರೋನಾ ವೈರಸ್ ನಿರ್ಬಂಧನೆಗಳನ್ನು ತೆಗೆದು ಹಾಕಿದ ನಂತರ ಸಾಮಾಜೀಕರಣ ಹೆಚ್ಚಾಯಿತು, ಅಂದರೆ ಜನರು ಸಭೆ, ಮದುವೆ ಸಮಾರಂಭ ಮತ್ತು ಇನ್ನಿತರೆ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಯಾವುದೇ ಮಾಸ್ಕ್ ಹಾಕದೆ ಭಾಗವಹಿಸುವುದು ಮತ್ತು ಎರಡನೇಯದಾಗಿ, ಲಸಿಕೆ ವರ್ಧಕದಿಂದ ಕ್ಷೀಣಿಸುತ್ತಿರುವ ರಕ್ಷಣೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ತೆಗೆದುಕೊಂಡ ಸುಮಾರು 95,000 ಹೋಮ್ ಸ್ವಾಬ್ ಪರೀಕ್ಷೆಗಳನ್ನು ಮಾಡಿದ ಸರ್ಕಾರ ನಿಯೋಜಿಸಿದ ರಿಯಾಕ್ಟ್ ಕೋವಿಡ್-19 ಮೇಲ್ವಿಚಾರಣಾ ಕಾರ್ಯಕ್ರಮವು, ಈ ಅವಧಿಯಲ್ಲಿ ಇಂಗ್ಲೆಂಡ್ ನಲ್ಲಿ ಸುಮಾರು 35 ಜನರಲ್ಲಿ ಒಬ್ಬರಿಗೆ ಈ ಕೋವಿಡ್ ಸೋಂಕು ತಗುಲಿರುವುದು ಕಂಡು ಬಂದಿತ್ತು ಮತ್ತು ಇದು 55 ವರ್ಷಕ್ಕಿಂತ ಮೆಲ್ಪಟ್ಟವರಲ್ಲಿ ಸೋಂಕುಗಳು ಹೆಚ್ಚುತ್ತಿವೆ ಎಂದು ತೋರಿಸಿದೆ.
ಓಮಿಕ್ರಾನ್ ರೂಪಾಂತರದ ಉಪ-ರೂಪಾಂತರ:
ಆದರೆ ಕಳೆದ 7 ದಿನಗಳಲ್ಲಿ 3, 46,000 ಕ್ಕೂ ಹೆಚ್ಚು ಜನರು ಪಾಸಿಟಿವ್ ಎಂದು ಪರೀಕ್ಷಿಸಲಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತೋರಿಸಿವೆ, ಇದು ಹಿಂದಿನ ವಾರಕ್ಕಿಂತ 46 ಪ್ರತಿಶತ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಸುಮಾರು ಅರ್ಧದಷ್ಟು ಪಾಸಿಟಿವ್ ಪ್ರಕರಣಗಳು ಓಮಿಕ್ರಾನ್ ರೂಪಾಂತರದ ಉಪ-ರೂಪಾಂತರವಾಗಿದೆ ಎಂದು ಅಧ್ಯಯನವು ಅಂದಾಜಿಸಿದೆ, ಇದು ಹೆಚ್ಚು ಸಾಂಕ್ರಾಮಿಕ ಎಂದು ಸಂಶೋಧಕರು ಹೇಳುತ್ತಾರೆ.
ವಯಸ್ಸಾದವರಲ್ಲಿ ಹೆಚ್ಚುತ್ತಿದೆ ಸೋಂಕು:
ಈ ಅಧ್ಯಯನದ ನಿರ್ದೇಶಕ ಪಾಲ್ ಎಲಿಯಟ್, ವಿಶೇಷವಾಗಿ ವಯಸ್ಸಾದವರು ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದು ಮತ್ತು ಇವರುಗಳಿಗೆ ಕೋವಿಡ್ ಸೋಂಕುಗಳು ಹೆಚ್ಚುತ್ತಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ. ಆದರೆ ಇದು ಎಲ್ಲಿಯವರೆಗೆ ಸೋಂಕು ಹೆಚ್ಚುತ್ತದೆ ಎಂಬುದು ನಮಗೆ ತಿಳಿದಿಲ್ಲ.
ಅಲ್ಲದೆ ನಾವು ನಿಜವಾಗಿಯೂ ಪ್ರತಿಕ್ರಿಯೆಯಂತಹ ಸಮೀಕ್ಷೆಗಳ ಮೂಲಕ ಸೋಂಕಿನ ದತ್ತಾಂಶವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕಾಗಿದೆ ಮತ್ತು ನಾವು ಆಸ್ಪತ್ರೆಗೆ ದಾಖಲಾಗುವವರನ್ನು ಮೇಲ್ವಿಚಾರಣೆಯನ್ನೂ ಮಾಡಬೇಕಾಗಿದೆ ಎಂದು ಎಲಿಯಟ್ ಹೇಳುತ್ತಾರೆ.
ಕೋವಿಡ್ ಇನ್ನೂ ಮುಗಿದಿಲ್ಲ:
ಯುಕೆ ಆರೋಗ್ಯ ಭದ್ರತಾ ಸಂಸ್ಥೆಯ ಮುಖ್ಯಸ್ಥ ಜೆನ್ನಿ ಹ್ಯಾರಿಸ್ ಅವರು “ಕೋವಿಡ್ ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲ ಮತ್ತು ಕೋವಿಡ್ ಪ್ರಕರಣಗಳು ಈಗ ಮತ್ತೆ ಇನ್ನಷ್ಟು ಹೆಚ್ಚುವುದನ್ನು ನಾವು ನಿರೀಕ್ಷಿಸಬಹುದು” ಎಂದು ಅವರು ಹೇಳಿದರು.