ಕೆಜೆ ಜಾರ್ಜ್ ರಿಂದ ಮಾನನಷ್ಟ ಮೊಕದ್ದಮೆ ದಾಖಲು..!

ಬೆಂಗಳೂರು

    ತಮ್ಮ ವಿರುದ್ಧ ಆಧಾರರಹಿತ ಹಾಗೂ ವರ್ಚಸ್ಸಿಗೆ ಧಕ್ಕೆ ತರುವ ಗಂಭೀರ ಆರೋಪವನ್ನು ಮಾಡಿದ್ದಾರೆ.ಇದರಿಂದಾಗಿ ತಮಗೆ ತೇಜೋವಧೆಯಾಗಿದೆ ಎಂದು ಆಪಾದಿಸಿ ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರು ರವಿಕೃಷ್ಣಾ ರೆಡ್ಡಿ ಮತ್ತು ಎನ್.ಆರ್.ರಮೇಶ್ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದರು.

    ನಗರದ ಸಿಟಿ ಸಿವಿಲ್ ಕೋರ್ಟ್ ನಲ್ಲಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ಕೆ.ಜೆ.ಜಾರ್ಜ್ ಅವರು ಪಿಸಿಆರ್ (ಖಾಸಗಿ ದೂರು) ದಾಖಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನನ್ನ ವಿರುದ್ಧ ಆಧಾರ ರಹಿತ ಹಾಗೂ ಸತ್ಯಕ್ಕೆ ದೂರವಾದ ಆರೋಪ ಗಳನ್ನು ರವಿ ಕೃಷ್ಣಾರೆಡ್ಡಿ ಹಾಗೂ ಎನ್.ಆರ್.ರಮೇಶ್ ನಿರಂತರವಾಗಿ ಮಾಡಿದ್ದಾರೆ.ಇದರಿಂದ ನನ್ನ ತೇಜೋವಧೆ ಮತ್ತು ಮಾನನಷ್ಟ ಆಗಿದೆ. ಈ ಹಿನ್ನೆಲೆಯಲ್ಲಿ ಇಂದು ಮಾನ ನಷ್ಟ ಪ್ರಕರಣ ಹೂಡಿದ್ದೇನೆ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೇನೆ ಎಂದು ಅವರು ತಿಳಿಸಿದರು.

    ಲಂಚಮುಕ್ತ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಅವರು ಕೆ.ಜೆ ಜಾರ್ಜ್ ಅವರಿಂದ ಅಕ್ರಮ ಆಸ್ತಿ ಗಳಿಸಿದ್ದಾರೆಂಬ ಆರೋಪಿಸಿದರು.ಜಾರ್ಜ್ ಅವರು ತಮ್ಮ ಮಗ ಮತ್ತು ಮಗಳ ಹೆಸರಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ. ವಿದೇಶದಲ್ಲಿ ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿದ್ಧಾರೆ ಎಂದು ಜಾರಿ ನಿರ್ದೇಶನಾಲಯಕ್ಕೆ ರವಿ ಕೃಷ್ಣಾ ರೆಡ್ಡಿ,ವಿದೇಶಗಳಲ್ಲಿರುವ ಜಾರ್ಜ್ ಆಸ್ತಿ ಬಗ್ಗೆ ತನಿಖೆ ನಡೆಸಿ ಮುಟ್ಟುಗೋಲು ಹಾಕಿ ಕೊಳ್ಳುವಂತೆ ಮನವಿ ಮಾಡಿದ್ದರು.

    ತಮ್ಮ ವಿರುದ್ಧದ ಅಕ್ರಮ ಆಸ್ತಿ ಗಳಿಕೆಯ ಆರೋಪಗಳನ್ನು ಕೆ.ಜೆ. ಜಾರ್ಜ್ ಸಾರಸಗಟಾಗಿ ನಿರಾಕರಿಸಿದ್ದು,ತಾವು ಅಕ್ರಮ ಹಾದಿಯಲ್ಲಿ ಆಸ್ತಿ ಸಂಪಾದನೆ ಮಾಡಿಲ್ಲ.ನ್ಯಾಯಯುತವಾಗಿ ವ್ಯವಹಾರ ಮಾಡಿಕೊಂಡು,ತೆರಿಗೆ ಕಟ್ಟುಕೊಂಡು ಬಂದಿದ್ದೇನೆ ಎಂದು ಜಾರ್ಜ್ ಹಲವು ಬಾರಿ ಸ್ಪಷ್ಟನೆ ಕೊಟ್ಟಿದ್ದರು ಪದೇ ಪದೇ ದುರುದ್ದೇಶಪೂರ್ವಕವಾಗಿ ಆರೋಪ ಮಾಡಲಾಗುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

   ಸಿವಿಲ್ ಪ್ರಕರಣ ದಾಖಲಿಸಿದ್ದು ಮುಂದಿನ ದಿನಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ವಕೀಲರ ಜೊತೆ ಚೆರ್ಚಿಸಿ ತೀರ್ಮಾನಿಸುತ್ತೇನೆ .ಹಾಗೂ ಎಷ್ಟು ಮೊತ್ತದ ಮಾನನಷ್ಟ ಹೂಡಬೇಕೆಂದು ಮುಂದಿನ ದಿನಗಳಲ್ಲಿ ತೀರ್ಮಾನಿಸುವುದಾಗಿ ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap