X’ ಮೇಲೆ ಸೈಬರ್ ದಾಳಿ : ಒಂದು ರಾಷ್ಟ್ರದ ಕೈವಾಡ ಎಂದ ಎಲಾನ್‌ ಮಸ್ಕ್!

ವಾಷಿಂಗ್ಟನ್:‌

    ಜನಪ್ರಿಯ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಭಾರೀ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿದ್ದು, ದೊಡ್ಡ ಮಟ್ಟದ ಸೈಬರ್ ದಾಳಿಯಿಂದಾಗಿ ಈ ರೀತಿ ಆಗಿದೆ ಎಂದು ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ಅವರು ಹೇಳಿದ್ದಾರೆ.ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಎಕ್ಸ್‌’ ಮೇಲೆ ಉದ್ದೇಶಪೂರ್ವಕ ಸೈಬರ್‌ ದಾಳಿ ನಡೆದಿದ್ದು, ಸಂಘಟಿತ ಗುಂಪು ಅಥವಾ‌ ವಿರೋಧಿ ರಾಷ್ಟ್ರವೇ ಇದರ ಹಿಂದೆ ಇರಬಹುದು,ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

   “X ವಿರುದ್ಧ ದೊಡ್ಡ ಮಟ್ಟದ ಸೈಬರ್ ದಾಳಿ ನಡೆದಿದೆ. ಪ್ರತಿದಿನ ಇಂತಹ ದಾಳಿಗಳು ಸಾಮಾನ್ಯವಾದರೂ, ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ ಸೈಬರ್‌ ದಾಳಿ ನಡೆಸಲಾಗಿದೆ. ಒಂದು ದೊಡ್ಡ ಸಂಘಟಿತ ಗುಂಪು ಅಥವಾ ಯಾವುದೋ ವಿರೋಧಿ ದೇಶ ಈ ಷಡ್ಯಂತ್ರದಲ್ಲಿ ಭಾಗಿಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ದಾಳಿಯ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಹೇಳಿದ್ದಾರೆ.

   ಎಲಾನ್‌ ಮಸ್ಕ್ ಒಡೆತನದ ಟ್ವಿಟರ್‌ ಸೋಮವಾರ ಜಗತ್ತಿನ ಬಹುತೇಕ ಪ್ರದೇಶಗಳಲ್ಲಿ ತಾಂತ್ರಿಕ ಸಮಸ್ಯೆಗೆ ತುತ್ತಾಗಿತ್ತು. ಸರ್ವರ್‌ ಡೌನ್‌ ಕಾರಣ ಲಾಗಿನ್‌ ಆಗುವುದು ಸೇರಿದಂತೆ ಟ್ವಿಟರ್‌ ಬಳಕೆ ನಿಧಾನವಾಗಿತ್ತು. ನಂತರ ಕೆಲವೇ ಗಂಟೆಗಳಲ್ಲಿ ಈ ಸಮಸ್ಯೆ ಪರಿಹಾರವಾಯಿತು. ಆದರೂ ಜನ ಮಸ್ಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರವನ್ನು ಸರಿ ಮಾಡುತ್ತೇನೆ ಎನ್ನುವ ಮಸ್ಕ್ ಗೆ ಟ್ವಿಟರ್‌ ಸರಿಮಾಡಲಾಗುತ್ತಿಲ್ಲ ಎಂದು ಟೀಕಿಸಿದ್ದರು.

   ಡೌನ್‌ಡೆಟೆಕ್ಟರ್ ಪ್ರಕಾರ ಎಕ್ಸ್‌ ಸಾಮಾಜಿಕ ಜಾಲತಾಣವು ದಿನವಿಡೀ ಮೂರು ಬಾರಿ ಸ್ಥಗಿತಗೊಂಡಿದೆ. ಭಾರತೀಯ ಬಳಕೆದಾರರಿಂದ ಸುಮಾರು 2,200 ದೂರುಗಳು ಕೂಡ ದಾಖಲಾಗಿವೆ. ಮಧ್ಯಾಹ್ನ ಆರಂಭವಾದ ತಾಂತ್ರಿಕ ತೊಂದರೆ ದಿನವೀಡಿ ಕಂಡುಬಂದಿದೆ. 

   ಮಧ್ಯಾಹ್ನ 3 ಗಂಟೆಗೆ, ಸಂಜೆ 7 ಗಂಟೆಗೆ ಮತ್ತು ರಾತ್ರಿ 9 ಗಂಟೆಗೆ ಎಕ್ಸ್‌ನಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿದ್ದು, ಪ್ರತಿ ಬಾರಿಯೂ ಸುಮಾರು ಒಂದು ಗಂಟೆಗಳ ಕಾಲ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಇದರಿಂದ ಜಾಗತಿಕ ಬಳಕೆದಾರರು ಗೊಂದಲಕ್ಕೀಡಾಗಿದ್ದಲ್ಲದೇ, ಈ ಕುರಿತು ಎಕ್ಸ್‌ಗೆ ದೂರುಗಳನ್ನು ಕೂಡ ದಾಖಲಿಸಿದ್ದಾರೆ.ಟ್ರ್ಯಾಕಿಂಗ್ ವೆಬ್‌ಸೈಟ್ ವರದಿ ಮಾಡಿದಂತೆ ಸುಮಾರು ಶೇ. 52ರಷ್ಟು ಸಮಸ್ಯೆಗಳು ವೆಬ್‌ಸೈಟ್‌ಗೆ ಸಂಬಂಧಿಸಿದವುಗಳಾಗಿದ್ದರೆ, ಶೇ. 41ರಷ್ಟು ಸಮಸ್ಯೆಗಳು ಆ್ಯಪ್‌ಗೆ ಸಂಬಂಧಿಸಿವೆ. ಅದೇ ರೀತಿ ಶೇ. 8ರಷ್ಟು ಸರ್ವರ್ ಸಂಪರ್ಕ ಸಮಸ್ಯೆ ಕಂಡುಬಂದಿದೆ.

   ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ದಾಳಿಯ ಸ್ವರೂಪ ಮತ್ತು ವ್ಯಾಪ್ತಿಯನ್ನು ಇನ್ನೂ ನಿರ್ಣಯಿಸಲಾಗುತ್ತಿದೆ. ಈ ದಾಳಿಯು ಎಕ್ಸ್‌ನ ನ ಬಳಕೆದಾರರ ಮೇಲೆ ಯಾವುದೇ ಪರಿಣಾಮ ಬೀರಿದೆಯೇ ಎಂಬುದು ಸ್ಪಷ್ಟವಾಗಿಲ್ಲ.ಎಕ್ಸ್‌ ತನ್ನ ಭದ್ರತಾ ಕ್ರಮಗಳನ್ನು ಬಲಪಡಿಸುತ್ತಿದೆ ಎಂದು ಹೇಳಿದ್ದು, ಭವಿಷ್ಯದಲ್ಲಿ ಇಂತಹ ದಾಳಿಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದೆ.

   ಇತ್ತೀಚಿನ ವರದಿಗ ಪ್ರಕಾರ, ರಾತ್ರಿ 9 ಗಂಟೆಯ ನಂತರ ಪ್ಲಾಟ್‌ಫಾರ್ಮ್‌ನ ಸೇವೆಗಳನ್ನು ಮರುಸ್ಥಾಪಿಸಲಾಗಿದೆ. ಈ ಮೂಲಕ ಬಳಕೆದಾರರಿಗೆ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಅನ್ನು ಮತ್ತೆ ಪ್ರವೇಶಿಸಲು ಅನುವು ಮಾಡಿಕೊಡಲಾಗಿದೆ.

Recent Articles

spot_img

Related Stories

Share via
Copy link