ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆ: ಗ್ರಾಹಕರ ಪರದಾಟ!!

 ತುಮಕೂರು :

     ದಸರಾ ಉಡುಗೊರೆ ಎಂಬಂತೆ ಕಳೆದ ಕೆಲವು ದಿನಗಳಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಸತತವಾಗಿ ನಾಲ್ಕು ದಿನಗಳ ಕಾಲ ಪೆಟ್ರೋಲ್ ದರ ಏರಿಕೆಯಾಗಿ ಗ್ರಾಹಕರಲ್ಲಿ ಆತಂಕ ಮೂಡಿಸಿದ್ದರೆ, ಮಹಾಲಯ ಅಮಾವಾಸ್ಯೆಯಂದು ಎಲ್.ಪಿ.ಜಿ. ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಳ ಮಾಡಿ ಜನತೆಯಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ.

     ಸಿಲಿಂಡರ್‍ಗೆ 15 ರೂ. ಹೆಚ್ಚಳ ಮಾಡಲಾಗಿದ್ದು, ದರ ಏರಿಕೆ ಬುಧವಾರದಿಂದಲೇ ಜಾರಿಗೆ ಬಂದಿದೆ. ಈ ಮೂಲಕ ಎರಡು ತಿಂಗಳ ಅವಧಿಯಲ್ಲಿ ಸತತವಾಗಿ ನಾಲ್ಕನೇ ಬಾರಿ ದರ ಹೆಚ್ಚಳ ಮಾಡಿದಂತಾಗಿದೆ.

     ಅಕ್ಟೋಬರ್ 6 ರಂದು ಸಬ್ಸಿಡಿ ಇಲ್ಲದ 14.2 ಕೆ.ಜಿ. ಎಲ್.ಪಿ.ಜಿ. ಸಿಲಿಂಡರ್ ಬೆಲೆಯನ್ನು 15 ರೂ. ಏರಿಕೆ ಮಾಡಿರುವುದಾಗಿ ಸರ್ಕಾರಿ ತೈಲ ಕಂಪನಿಗಳು ಮಾಹಿತಿ ನೀಡಿವೆ. ಈ ಬೆಲೆ ಏರಿಕೆಯೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ 884.50 ರೂ.ಗಳಿಂದ 899.50 ರೂ.ಗಳಿಗೆ ಏರಿಕೆಯಾದಂತಾಗಿದೆ.

     ಕೊರೊನಾ ಸಂಕಷ್ಟದಿಂದ ಜನಸಾಮಾನ್ಯರು ನರಳುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ಪರಿಹಾರಗಳು ಜನತೆಯನ್ನು ತಲುಪುತ್ತಿಲ್ಲ. ಈ ನಡುವೆ ಸಬ್ಸಿಡಿಯಂತಹ ಯೋಜನೆಗಳು ರದ್ದಾಗುತ್ತಿವೆ. ಕೆಲವು ಸರ್ಕಾರಿ ಅನುದಾನಗಳು ಸ್ಥಗಿತಗೊಂಡಿವೆ. ಉದ್ಯೋಗಕ್ಕೂ ಕತ್ತರಿ ಹಾಕಲಾಗಿದೆ. ಇದೆಲ್ಲದರ ಸಂಕಷ್ಟಗಳ ನಡುವೆ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಲೇ ಇವೆ. ಈ ನಡುವೆ ಸಿಲಿಂಡರ್ ಬೆಲೆ ಹೆಚ್ಚಳವಾಗಿದ್ದು, ಮುಂದೇನು ಹೆಚ್ಚಳವಾಗಲಿದೆ ಕಾದುನೋಡಬೇಕು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಅಡುಗೆ ಅನಿಲದ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 

      ಅಕ್ಟೋಬರ್ ಮೊದಲ ದಿನದಂದು ತೈಲ ಕಂಪನಿಗಳು 19 ಕೆ.ಜಿ. ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‍ಗೆ 43.5 ರೂ ಏರಿಕೆ ಮಾಡಿದ್ದರು. ಇದೀಗ ದೇಶೀಯ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇದರಿಂದ 5 ಕೆ.ಜಿ, ಸಿಲಿಂಡರ್ ಬೆಲೆ 502 ರೂ ಆಗಿದೆ. ಅಕ್ಟೋಬರ್ 6ರಿಂದಲೇ ಹೊಸ ಬೆಲೆ ಜಾರಿಗೆ ಬರಲಿದೆ. ಎರಡು ತಿಂಗಳಿನಲ್ಲಿ ನಾಲ್ಕನೇ ಬಾರಿ ಬೆಲೆ ಏರಿಕೆಯಾಗಿದೆ. ಸೆಪ್ಟೆಂಬರ್ 1ರಂದು ಕೊನೆಯದಾಗಿ ಸಬ್ಸಿಡಿ ಹಾಗೂ ಸಬ್ಸಿಡಿರಹಿತ ಸಿಲಿಂಡರ್ ಬೆಲೆಯನ್ನು 25ರೂ ಏರಿಕೆ ಮಾಡಲಾಗಿತ್ತು. ಇಂದಿನ ಬೆಲೆ ಹೆಚ್ಚಳದೊಂದಿಗೆ ಜನವರಿ 1ರಿಂದ ಸಿಲಿಂಡರ್‍ಗೆ ಒಟ್ಟು 205ರೂ ಏರಿಕೆಯಾದಂತಾಗಿದೆ.

  ಮುಂಗಾರು ಅಂತ್ಯ ಸೂಚನೆ;

      ಈ ರಾಜ್ಯಗಳಲ್ಲಿ ಇನ್ನೂ ಕೆಲ ದಿನ ಮಳೆ ದೇಶದಲ್ಲಿ ಇಂಧನ ದರವೂ ಏರಿಕೆ ಹಾದಿಯಲ್ಲಿದ್ದು, ಬುಧವಾರ, ಅಕ್ಟೋಬರ್ 6ರಂದು ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಿಸಲಾಗಿದೆ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿವೆ. ಪೆಟ್ರೋಲ್ ದರ ಪ್ರತಿ ಲೀಟರ್ ಮೇಲೆ 30 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಮೇಲೆ 35 ಪೈಸೆ ಹೆಚ್ಚಳವಾಗಿದೆ. ಮಂಗಳವಾರ ಇಂಧನ ದರ 25-30 ಪೈಸೆಯಂತೆ ಏರಿಕೆಯಾಗಿತ್ತು. ಇಂದು ಮತ್ತೆ ಏರಿಕೆಯಾಗಿದೆ. ಜಾಗತಿಕವಾಗಿ ಕಚ್ಚಾತೈಲ ಬೆಲೆ 80 ಡಾಲರ್ ದಾಟಿ ಮುನ್ನುಗ್ಗುತ್ತಿದ್ದು, ಭಾರತದಲ್ಲಿ ಕಳೆದ 13 ದಿನಗಳಲ್ಲಿ 10 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ.

 14.2 ಕೆ.ಜಿ. ಸಿಲಿಂಡರ್ ದರ:

    ಚಿನ್ನದ ಬೆಲೆ ಇಳಿಕೆ;

     ಅಕ್ಟೋಬರ್ 6ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ? ಪೆಟ್ರೋಲಿಯಂ ಕಂಪನಿಗಳು ಪ್ರತಿ ತಿಂಗಳ 1 ಮತ್ತು 15ನೇ ತಾರೀಕಿನ ಬಳಿಕ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಅದರಂತೆ ಅಕ್ಟೋಬರ್ 6ರಿಂದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದೆ. * ದೆಹಲಿಯಲ್ಲಿ ಸಬ್ಸಿಡಿ ಇಲ್ಲದ 14.2 ಕೆ.ಜಿ. ಸಿಲಿಂಡರ್ ಬೆಲೆ 899.50 ರೂ ಆಗಿದೆ. * ಕೋಲ್ಕತ್ತಾದಲ್ಲಿ 911 ರೂ ಇಂದ 926 ರೂ ಆಗಿದೆ * ಮುಂಬೈನಲ್ಲಿ 844.50 ರೂ ಇಂದ 899.50ರೂ ಗೆ ಏರಿಕೆ * ಚೆನ್ನೈನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 915.50ರೂ ಆಗಿದೆ. ಈ ವರ್ಷ ಸಿಲಿಂಡರ್‍ಗೆ 205 ರೂ ಬೆಲೆ ಏರಿಕೆ; ಕಳೆದ ನವೆಂಬರ್ ತಿಂಗಳಿನಿಂದಲೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿತ್ತು. ಹೀಗಾಗಿ ಭಾರತದಲ್ಲಿಯೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಕಂಡಿತ್ತು. ಪೆಟ್ರೋಲ್, ಡೀಸೆಲ್ ದರ ಸೇರಿದಂತೆ ಎಲ್‍ಪಿಜಿ ಸಿಲಿಂಡರ್ ದರದಲ್ಲಿಯೂ ಏರಿಕೆ ಮಾಡಲಾಗಿತ್ತು. ಒಟ್ಟಾರೆ ಜನವರಿ 1, 2021ರಿಂದ ಅಕ್ಟೋಬರ್ 6, 2021ರವರೆಗೆ 205 ರೂ ನಷ್ಟು ಬೆಲೆ ಏರಿಕೆಯಾದಂತಾಗಿದೆ.

ಜೀವನ ಮಾಡುವುದು ಹೇಗೆ?

      ಎರಡು ವರ್ಷಗಳಿಂದ ನಾವು ಜೀವನ ಸಾಗಿಸುವುದೇ ಕಷ್ಟವಾಗಿದೆ. ಲಾಕ್‍ಡೌನ್ ಪರಿಣಾಮವಾಗಿ ಆಟೋರಿಕ್ಷಾ ಓಡಿಸಲು ಸಾಧ್ಯವಾಗಲಿಲ್ಲ. ಈಗತಾನೆ ಚೇತರಿಸಿಕೊಳ್ಳುತ್ತಿದ್ದೇವೆ. ಹಳೆಯ ಸಾಲಗಳನ್ನು ತೀರಿಸಬೇಕು. ಪೆಟ್ರೊಲ್ ದರ ಏರಿಕೆಯಾಗುತ್ತಿದೆ. ನಾವು ಕೊಳ್ಳುವ ಎಲ್ಲ ಪದಾರ್ಥಗಳ ಬೆಲೆಯೂ ಹೆಚ್ಚಳವಾಗಿದೆ. ಈಗ ಪದೆ ಪದೆ ಅಡುಗೆ ಅನಿಲದ ದರ ಹೆಚ್ಚಳ ಮಾಡುತ್ತಿದ್ದಾರೆ. ಹೀಗಾದರೆ ಬಡ ವರ್ಗದ ನಮ್ಮಂಥಹವರು ಜೀವನ ನಡೆಸುವುದಾದರೂ ಹೇಗೆ? ದರ ಏರಿಕೆಗೆ ಸರ್ಕಾರಗಳು ಕಡಿವಾಣ ಹಾಕಬೇಕಲ್ಲವೆ?

-ಅಂಜನಮೂರ್ತಿ, ರಿಕ್ಷಾ ಚಾಲಕ.

ಸಬ್ಸಿಡಿ ನಿಲ್ಲಿಸಿ ಖಾಸಗಿಗೆ ಮಣೆ

      ಹಿಂದೆ ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡಲಾಗುತ್ತಿತ್ತು. ಕೇಂದ್ರ ಸರ್ಕಾರ ಅದನ್ನು ನಿಲ್ಲಿಸಿತು. ಮಹಿಳೆಯರ ಕಣ್ಣೀರು ಒರೆಸುವುದಾಗಿ ಹೇಳಿ ಉಚಿತ ಉಜ್ವಲ ಯೋಜನೆ ಜಾರಿಗೆ ತಂದಿತು. ಈ ಯೋಜನೆಯ ಹಿಂದೆ ಕಂಪನಿಗಳಿಗೆ ಲಾಭ ಮಾಡಿಕೊಡುವ ಹುನ್ನಾರ ಅಡಗಿತ್ತು. ಬಡ ವರ್ಗದ ಮಹಿಳೆಯರು ಕೂಲಿ ನಾಲಿ ಮಾಡಿ ಬದುಕುತ್ತಿದ್ದು, ಪದೆ ಪದೆ ಸಿಲಿಂಡರ್ ದರ ಹೆಚ್ಚಳ ಮಾಡುತ್ತಿರುವುದರಿಂದ ಗ್ಯಾಸ್ ಸಿಲಿಂಡರ್ ಬಿಟ್ಟು ಸಾಂಪ್ರದಾಯಿಕ ಇಂಧನ ಮೊರೆ ಹೋಗುವಂತಾಗಿದೆ. ಕಳೆದ ಫೆಬ್ರವರಿಯಿಂದ ನಿರಂತರವಾಗಿ ಬೆಲೆ ಹೆಚ್ಚಳ ಮಾಡಲಾಗುತ್ತಿದೆ. ಕಂಪನಿಗೆ ಲಾಭ ಮಾಡಿಕೊಡುವುದನ್ನು ಬಿಟ್ಟು ಎಲ್ಲ ಗ್ರಾಹಕರಿಗೂ ಸಬ್ಸಿಡಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿ.
-ಸುಬ್ರಹ್ಮಣ್ಯ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ.

ಬಡವರ ಬದುಕಿನ ಮೇಲೆ ಹೊಡೆತ

      ಬಹಳಷ್ಟು ವರ್ಗದ ಜನರಿಗೆ ವರಮಾನ ಇಲ್ಲದಂತಾಗಿದೆ. ಕೊರೊನಾ ನಂತರದ ಬದುಕು ಅತ್ಯಂತ ದುಸ್ತರವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರಗಳು ಜನಸಾಮಾನ್ಯರ ರಕ್ಷಣೆಗೆ ಬರಬೇಕು. ಆದರೆ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿರುವುದರಿಂದ ಹಿಡಿದು ಜನಪರ ಯೋಜನೆಗಳ ಕಡೆಗೂ ಗಮನ ಹರಿಸುತ್ತಿಲ್ಲ. ಉದ್ಯೋಗಗಳು ಕಡಿವಾಗುತ್ತಿವೆ. ಈ ಸಂದರ್ಭದಲ್ಲಿ ಅತ್ಯಂತ ಜೀವನಾವಶ್ಯಕ ಅಡುಗೆ ಸಿಲಿಂಡರ್‍ನ ಬೆಲೆಯನ್ನು ಪದೆ ಪದೆ ಹೆಚ್ಚಿಸುತ್ತಿರುವುದರಿಂದ ಬಡವರ ಮೇಲೆ ಮತ್ತಷ್ಟು ಹೊರೆ ಹಾಕಿದಂತಾಗಿದೆ. ಹೆಣ್ಣು ಮಕ್ಕಳು ಕಣ್ಣೀರಿನಲ್ಲಿ ಬದುಕು ಸಾಗಿಸುವಂತಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸ್ಥಗಿತಗೊಳಿಸಿರುವ ಸಬ್ಸಿಡಿ ಮುಂದುವರೆಸಬೇಕು ಹಾಗೂ ದರ ಏರಿಕೆಗೆ ಕಡಿವಾಣ ಹಾಕಬೇಕು.

-ಹೆಚ್.ಕೆ.ಮಹಾಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಜಿಲ್ಲಾ ಜೆಡಿಎಸ್.

 

Recent Articles

spot_img

Related Stories

Share via
Copy link
Powered by Social Snap