ಗುಜರಾತ್ ಕೈಗಾರಿಕಾ ಘಟಕದಲ್ಲಿ ಸ್ಫೋಟ: 4 ಕಾರ್ಮಿಕರ ಸಾವು

ಅಹಮದಾಬಾದ್: 

  ಗುಜರಾತ್‌ನ ಅಂಕಲೇಶ್ವರದ ಗುಜರಾತ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್(ಜಿಐಡಿಸಿ)ನಲ್ಲಿರುವ ಡಿಟಾಕ್ಸ್ ಇಂಡಿಯಾ ಪ್ರೈ.ಲಿ.ನಲ್ಲಿ ಮಂಗಳವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.

   ಕಂಪನಿಯ ಎಂಇ ಪ್ಲಾಂಟ್‌ನಲ್ಲಿ ಸ್ಟೀಮ್ ಪ್ರೆಶರ್ ಪೈಪ್ ಒಡೆದು ಸ್ಫೋಟ ಸಂಭವಿಸಿದ್ದು, ಇಂಡಸ್ಟ್ರಿಯಲ್ ಪ್ರದೇಶದಲ್ಲಿ ತೀವ್ರ ಆಘಾತವನ್ನು ಉಂಟುಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಂಪನಿಯ ಪ್ಲಾಂಟ್‌ನಲ್ಲಿ ಫೀಡ್ ಟ್ಯಾಂಕ್‌ಗೆ ಕಾರ್ಮಿಕರು ರೇಲಿಂಗ್‌ಗಳನ್ನು ಅಳವಡಿಸುತ್ತಿದ್ದಾಗ ವೆಲ್ಡಿಂಗ್ ಸಮಯದಲ್ಲಿ ಹಠಾತ್ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ವರದಿ ಮಾಡಿದ್ದಾರೆ.

   ಘಟನೆ ಕುರಿತು ಮಾಹಿತಿ ಸ್ವೀಕರಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಸುರಕ್ಷತೆ ಹಾಗೂ ಆರೋಗ್ಯ ಇಲಾಖೆಯ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿತು. ಪರಿಸ್ಥಿತಿ ನಿಭಾಯಿಸಲು ಪೊಲೀಸ್ ಬೆಂಗಾವಲು ಪಡೆ ಕೂಡ ಆಗಮಿಸಿದೆ.ಭರೂಚ್ ಬಿಜೆಪಿ ಸಂಸದ ಮನ್ಸುಖ್ ವಾಸವಾ ಅವರು ಈ ಘಟನೆಗೆ ಸಂತಾಪ ಸೂಚಿಸಿದ್ದು, ಈ ಅವಘಡಕ್ಕೆ ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿ(ಜಿಪಿಸಿಬಿ) ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿದ್ದಾರೆ.

Recent Articles

spot_img

Related Stories

Share via
Copy link