ನವದೆಹಲಿ
ದೇಶದಲ್ಲಿ ತೀರ ಕುತೂಹಲ ಕೆರಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಒಂದಿಲ್ಲೊಂದು ಬೆಚ್ಚಿಬೀಳಿಸುವ ವಿಚಾರಗಳು ಬೆಳಕಿಗೆ ಬರುತ್ತಿವೆ . ಲಿವ್-ಇನ್ ಸಂಗಾತಿ ಶ್ರದ್ಧಾ ವಾಕರ್ ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿಯಾಗಿರುವ ಆಫ್ತಾಬ್ ಪೂನವಾಲಾ ಹಲವಾರು ವಿಚಾರಗಳನ್ನು ಪೊಲೀಸರ ಮುಂದೆ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಆರೋಪಿ ಆಫ್ತಾಬ್ ಮಾಂಸವನ್ನು ಹೇಗೆ ಸಂರಕ್ಷಿಸಬೇಕು ಎಂದು ತಿಳಿಯಲು ಬಾಣಸಿಗರಿಂದ ತರಬೇತಿ ಪಡೆದಿದ್ದರು ಎಂದು ಪೊಲೀಸರು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪೂನವಾಲಾ ತನ್ನ ಗೆಳತಿ ಶ್ರದ್ಧಾ ವಾಕರ್ ಅವರನ್ನು ಕತ್ತು ಹಿಸುಕಿ 35 ತುಂಡುಗಳಾಗಿ ಕತ್ತರಿಸಿ ಅಮಾನವೀಯವಾಗಿ ಹತ್ಯೆ ಮಾಡಿದ್ದರು. ಬಳಿಕ ಆಕೆಯ ಮೃತ ದೇಹವನ್ನು ಆರೋಪಿ ಆಫ್ತಾಬ್ 300-ಲೀಟರ್ ಫ್ರಿಜ್ನಲ್ಲಿ ಸುಮಾರು ಮೂರು ವಾರಗಳ ಕಾಲ ಸಂರಕ್ಷಿಸಿದ್ದನು. ಈ ವೇಳೆ ಆಫ್ತಾಬ್ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ನಿವಾಸದಲ್ಲಿ ವಾಸವಾಗಿದ್ದನು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ