ಬೆಂಗಳೂರು
ಪರಿಶಿಷ್ಟ ಜಾತಿಗಳ ಮೀಸಲಾತಿಯು ಈ ಸಮಾಜದ 101 ಜಾತಿಗಳ ಮಧ್ಯೆ ಸಮನಾಗಿ ಹಂಚಿಕೆಯಾಗಿಲ್ಲ ಹಾಗಾಗಿ ಮೀಸಲಾತಿ ವರ್ಗೀಕರಣ ಮಾಡಲು ಒತ್ತಾಯಿಸಿ ಕಳೆದ ಮೂರುವರೆ ದಶಕಗಳಿಂದ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಯುತ್ತಿದೆ.
ದಿನಾಂಕ: 01.08.2024 ರಂದು ಸುಪ್ರೀಂ ಕೋರ್ಟ್ ನ 7 ಜನ ನ್ಯಾಯಾಧೀಶರ ಪೀಠ ನೀಡಿದ ತೀರ್ಪಿನಂತೆ ಕೂಡಲೇ ಪರಿಶಿಷ್ಟರ ಮೀಸಲಾತಿಯ ವರ್ಗೀಕರಿಸಲು ಒತ್ತಾಯಿಸಿದೆ.
ಹೀಗಾಗಲೇ 50 ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸಹಸ್ರಾರು ಜನ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಭಾರಿ ಬೃಹತ್ ಸಮಾವೇಶ ನಡೆಸಲಾಯಿತು ಆದ್ರೂ ಜಾರಿಯಾಗುತ್ತಿಲ್ಲ ಆದ್ದರಿಂದ ಪರಿಶಿಷ್ಟರ ಒಳಮೀಸಲಾತಿಗೆ ಏಪ್ರಿಲ್ 14 ರಿಂದ ರಾಜ್ಯಾದ್ಯಂತ ಜನಾಂದೋಲನ ನಡೆಯಲಿದೆ ಎಂದು ರಾಜ್ಯಾಧ್ಯಕ್ಷರು ಡಾ|| ಎನ್. ಮೂರ್ತಿ ತಿಳಿಸಿದರು.
ಮಾನ್ಯ ಸಿದ್ದರಾಮಯ್ಯನವರು ತಮ್ಮ ಮನವಿಯಂತೆ ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡುವವರೆಗೂ ಯಾವುದೇ ಉದ್ಯೋಗ ನೇಮಕಾತಿ ವರ್ಗಾವಣೆ ಹಾಗೂ ಬ್ಯಾಕ್‌ಲಾಗ್ ಮತ್ತು ಬಡ್ತಿ ಮೀಸಲಾತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು. ಮೀಸಲಾತಿ ವರ್ಗೀಕರಣ ಶೀಘ್ರವಾಗಿ ಮಾಡಲಾಗುವುದು. ಅದಕ್ಕಾಗಿ ತಾರೀಖು 22.03.2025 ರಂದು ಮೀಸಲಾತಿ ಆಯೋಗದ ಅಧ್ಯಕ್ಷರಾದ ನಿ.ನ್ಯಾ ನಾಗಮೋಹನ್‌ದಾಸ್ ಕರೆದು ಚರ್ಚಿಸಿ ನಿಮ್ಮಗಳ ಒತ್ತಾಯದಂತೆ “ಮಧ್ಯಂತರ ವರದಿ ಪಡೆದು ಸಚಿವ ಸಂಪುಟದಲ್ಲಿ ಅನುಮೋದಿಸಿ ವರ್ಗೀಕರಣ ಮಾಡುವುದಾಗಿ ತಿಳಿಸಿದ್ದರು.
ಇದಕ್ಕಾಗಿ ಮನವೊಲಿಸಲು ದಿನಾಂಕ: 24.03.2025 ರಂದು ಸಮಾಜದ ಹಿರಿಯ ಸಚಿವರ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ಸಭೆಯಲ್ಲಿ ದಲಿತ ಮುಖಂಡರಿಗೆ ನೀಡಿದ ಭರವಸೆಯಂತೆ ಹಾಗೂ ಕೊಟ್ಟ ವಚನದಂತೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರು ಆಯೋಗದ ಅಧ್ಯಕ್ಷರಾದ ನಿ.ನ್ಯಾ. ನಾಗಮೋಹನ್‌ಾಸ್ ಮತ್ತು ಹಿರಿಯ ಸಚಿವರುಗಳೊಂದಿಗೆ ಸಭೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಲು ಆಯೋಗದ ಅಧ್ಯಕ್ಷರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ವಾರದೊಳಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದು ಪ್ರತಿಕಾ ಗೋಷ್ಠಿಯಲ್ಲಿ ತಿಳಿಸಿದರು.
ದ.ಸಂ.ಸ ಹಾಗೂ RPI (B) ಸರ್ಕಾರಕ್ಕೆ 15 ದಿನ ಗಡುವು ನೀಡಿದೆ. ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಜರೂರಾಗಿ ಪರಿಶಿಷ್ಟರ ಮೀಸಲಾತಿ ವರ್ಗೀಕರಿಸಬೇಕು. ತಪ್ಪಿದ್ದಲ್ಲಿ ಇದೇ ಏಪ್ರಿಲ್ 14 (ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ) ರಿಂದ “ರಾಜ್ಯಾಂದ್ಯಂತ ಜನಾಂದೋಲನ” ಕಾರ್ಯಕ್ರಮ ತೀರ್ವಗೊಳಿಸಲಾಗುವುದು ಎಂದು ರಾಜ್ಯಾಧ್ಯಕ್ಷರು ಡಾ|| ಎನ್. ಮೂರ್ತಿ ತಿಳಿಸಿದರು..
