ಮಂಡ್ಯ
ಜಿಲ್ಲೆಯಲ್ಲಿ 30 ವರ್ಷ ದಾಟಿದರೂ ಮದುವೆಯಾಗದೆ ಉಳಿದ ಹುಡುಗರ ಗುಂಪು ಮಲೆ ಮಹದೇಶ್ವರನ ಮೊರೆ ಹೋಗಿ ದೇವರ ಸನ್ನಿಧಿಗೆ ಪಾದಯಾತ್ರೆ ಹೊರಟಿದ್ದು, ಈ ಯಾತ್ರೆಗೆ ಕನ್ನಡದ ಖ್ಯಾತ ನಟ ನಟರಾಕ್ಷಸ ಡಾಲಿ ಧನಂಜಯ್ ಚಾಲನೆ ನೀಡಿದ್ದಾರೆ.
ಈಗಿನ ಕಾಲದಲ್ಲಿ ಯುವಕರಿಗೆ ಮದುವೆಯಾಗಲು ಸರಿಯಾದ ವಧು ಸಿಗುತ್ತಿಲ್ಲ ಎಂದು ಅದರಲ್ಲೂ ರೈತರ ಮಕ್ಕಳಿಗಂತೂ ಮನೆಗೆ ಕರೆಯುವುದೇ ಇಲ್ಲ ಎಂದು ನೊಂದ ಯುವಕರ ಗುಂಪು ವಧು ಸಿಗಲಿ ಎಂದು ಹರಕೆ ಕಟ್ಟಿಕೊಂಡಿದ್ದಾರೆ ಎನ್ನಲಾಗಿದೆ.
ಈ ಗುಂಪು ಬ್ರಹ್ಮಚಾರಿಗಳ ನಡೆ ಮಾದಪ್ಪನ ಕಡೆ ಎಂಬ ಘೋಷವಾಕ್ಯದೊಂದಿಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಈ ಪಾದಯಾತ್ರೆಗೆ ನಟ ಡಾಲಿ ಧನಂಜಯ್ ಚಾಲನೆ ನೀಡಿ ಸ್ವಲ್ಪ ದೂರ ಹೆಜ್ಜೆ ಹಾಕಿದ್ದಾರೆ. ನಟ ಡಾಲಿ ಧನಂಜಯ್ ಅವರಿಗೂ ಮದುವೆಯಾಗಿಲ್ಲ ಎಂಬುದು ಇಲ್ಲಿ ವಿಶೇಷ. ಆದರೆ ಅಭಿಮಾನಿಗಳ ಒತ್ತಾಯದ ಮೇಲೆ ಅವರು ಇಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ ಕೆಎಂ ದೊಡ್ಡಿ ಯುವಕರಿಗೆ ಬೇಗ ಹೆಣ್ಣು ದೊರಕಲಿ ಎಂದು ಹಾರೈಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
