ಹೈದರಾಬಾದ್
ಹೈದರಾಬಾದಿನ ಅಪಾರ್ಟ್ಮೆಂಟ್ ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದ ಇಸ್ರೋದ ವಿಜ್ಞಾನಿ ಸುರೇಶ್ ಅವರ ಸಾವಿನ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಇಸ್ರೋದ ಎನ್ ಆರ್ ಎಸ್ ಸಿ ವಿಭಾಗದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಸುರೇಶ್ ಸೋಮವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದರು.ಪೊಲೀಸರ ಪ್ರಕಾರ ಅವರ ನಿಗೂಢ ಸಾವಿನ ಕಾರಣವೆನೆಂದರೆ ಅವರ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸಾವು ಸಂಭವಿಸಿದೆ ಮತ್ತು ಅವರದ್ದು ಸಹಜ ಸಾವಲ್ಲ ಎಂಬ ಅನುಮಾನ ಎದ್ದಿತ್ತು. ಸುರೇಶ್ ಅವರು ಸಾವಿಗೀಡಾದ ದಿನ ಅವರೊಂದಿಗೆ ಲ್ಯಾಬ್ ಟೆಕ್ನಿಶಿಯನ್ ಶ್ರೀನಿವಾಸ್ ಎಂಬುವವರಿದ್ದರು ಎಂಬ ಅಂಶ ಬೆಳಕಿಗೆ ಬಂದಿದ್ದು, ಅವರಿಬ್ಬರ ನಡುವೆ ಸಲಿಂಗಕಾಮವಿತ್ತು ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ