ಹಾಲು ,ಪೆಟ್ರೋಲ್‌ ಬೆನ್ನಲ್ಲೇ ಏರಿಕೆಯಾಯ್ತು ಅಡುಗೆ ಎಣ್ಣೆ ದರ….!

ಬೆಂಗಳೂರು

    ಹಾಲು, ಪೆಟ್ರೋಲ್ ಮತ್ತು ಇತ್ತೀಚೆಗೆ ಬಿಯರ್​ ದರ ಕೂಡ ಏರಿಕೆ ಆಗಿದ್ದು, ಇದೀಗ ಇವುಗಳ ಸಾಲಿಗೆ ಅಡುಗೆ ಎಣ್ಣೆ ಸಹ ಸೇರಿಕೊಂಡಿದೆ. ಆ ಮೂಲಕ ಪ್ರತಿನಿತ್ಯ ಒಂದಿಲ್ಲ ಒಂದು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇದು ಬಡ ಮತ್ತು ಮಧ್ಯಮ ವರ್ಗದ ಜನರ ಜೀವನಕ್ಕೆ ಮತ್ತಷ್ಟು ಹೊರೆಯಾಗಲಿದೆ. ಅಡುಗೆ ಎಣ್ಣೆ ದರ ಲೀಟರ್​ಗೆ 20 ರಿಂದ 15 ರೂಪಾಯಿಗೆ ದಿಢೀರ್​ ಏರಿಕೆ ಕಂಡಿದೆ.

    ಅಡುಗೆ ಎಣ್ಣೆಯು ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿದೆ. ಆದರೆ, ಅಡುಗೆ ಎಣ್ಣೆಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳ ಮಾಡಲಾಗಿದ್ದು, ಹೀಗಾಗಿ ಎಣ್ಣೆ ದರ ಗಗನಕ್ಕೇರಿದೆ. ಇದರಿಂದಾಗಿ ಗ್ರಾಹಕರು ಮತ್ತು ಹೋಟೆಲ್ ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಡುಗೆ ಎಣ್ಣೆ ಬೆಲೆ ಹೆಚ್ಚಾಗುತ್ತಿದ್ದಂತೆ ಗ್ರಾಹಕರು ಸಿಡಿಮಿಡಿಗೊಂಡಿದ್ದಾರೆ. ಈ ರೀತಿಯಾದರೆ ಜನ ಸಾಮಾನ್ಯರು ಬದುಕೊದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಈಗಾಗಲೆ ದಿನಬಳಕೆಯ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರಿಂದ ಬಡವರು ಬದುಕುವುದು ಕಷ್ಟ. ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಡುಗೆ ಎಣ್ಣೆ ಬೆಲೆ ಕಡಿಮೆ ಮಾಡಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.  

    ಪ್ರತಿ ಲೀಟರ್ ಅಡುಗೆ ಎಣ್ಣೆ ಬೆಲೆ 20 ರಿಂದ 25 ರೂ. ಹೆಚ್ಚಳ ಆಗಿದೆ. ತೆರಿಗೆ ದರ ಹೆಚ್ಚಳದಿಂದಾಗಿ ಬೆಲೆ‌ ಹೆಚ್ಚಳ ಆಗಿದೆ. ದರ ಹೆಚ್ಚಾದ ಮೇಲೆ ವ್ಯಾಪಾರ ಕಡಿಮೆಯಾಗಿದೆ. ಈ ಮೊದಲು ಗ್ರಾಹಕರು ಮೂರ್ನಾಲ್ಕು ಪ್ಯಾಕೆಟ್ ಎಣ್ಣೆ ತೆಗೆದುಕೊಂಡು ಹೋಗುತ್ತಿದ್ದರು. ಇದೀಗ ಬೆಲೆ ಹೆಚ್ಚಳದಿಂದ ಒಂದೆರಡು ಪ್ಯಾಕೆಟ್ ತೆಗೆದುಕೊಳ್ಳುತ್ತಿದ್ದಾರೆ. ನಮಗೂ ಸಂಗ್ರಹಿಸಿಟ್ಟುಕೊಳ್ಳುವುದು ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ.

  • ಸನ್ ಪ್ಯೂರ್ ಆಯಿಲ್: 108 (ಹಳೆಯ ದರ), 126 ರೂ. (ಈಗಿನ ದರ)
  • ಗೋಲ್ಡ್ ವಿನ್ನರ್: 110 (ಹಳೆಯ ದರ), 126 ರೂ (ಈಗಿನ ದರ)
  • ಫ್ರೀಡಂ: 110 (ಹಳೆಯ ದರ), 124 ರೂ (ಈಗಿನ ದರ)
  • ರುಚಿ ಗೋಲ್ಡ್:  96 (ಹಳೆಯ ದರ), 112 ರೂ (ಈಗಿನ ದರ)
  • ಜೆಮಿನಿ ಸನ್​ ಫ್ಲವರ್: 112 (ಹಳೆಯ ದರ), 127 ರೂ (ಈಗಿನ ದರ)
  • ಫಾರ್ಚುನ್​: 111 (ಹಳೆಯ ದರ), 126 ರೂ (ಈಗಿನ ದರ)
  • ಧಾರಾ: 116 (ಹಳೆಯ ದರ), 130 ರೂ (ಈಗಿನ ದರ)

Recent Articles

spot_img

Related Stories

Share via
Copy link
Powered by Social Snap