ಫಿಡೆ ಚೆಸ್​ ವಿಶ್ವಕಪ್ : ಸ್ಪರ್ಧೆಯಲ್ಲಿ ಸೋತರು ಜನರ ಮನ ಗೆದ್ದ ಪ್ರಜ್ಞಾನಂದ…!

 ಅಜರ್​ಬೈಜಾನ್​:

        ಯುವ ಚದುರಂಗ ಪ್ರತಿಭೆ ಆರ್​. ಪ್ರಜ್ಞಾನಂದ ಅಮೋಘ ನಿರ್ವಹಣೆಯ ನಡುವೆ ಫಿಡೆ ಚೆಸ್​ ವಿಶ್ವಕಪ್​ನಲ್ಲಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟರು. ವಿಶ್ವ ನಂ. 1 ಮ್ಯಾಗ್ನಸ್​ ಕಾರ್ಲ್​ಸೆನ್​ ವಿರುದ್ಧದ ಪ್ರಶಸ್ತಿ ಸುತ್ತಿನ ಹೋರಾಟದ ಟೈ ಬ್ರೇಕರ್​ನಲ್ಲಿ ಎಡವಿದ ಪ್ರಜ್ಞಾನಂದ 0.5-1.5ರಿಂದ ಮಣಿದರು.

      ಇದರ ನಡುವೆಯೂ ಟೂರ್ನಿಯಲ್ಲಿ ತೋರಿದ ಅದ್ಭುತ ಆಟದಿಂದಾಗಿ 18 ವರ್ಷದ ತರುಣ ಪ್ರಜ್ಞಾನಂದ ಕ್ರೀಡಾಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರು ಪ್ರಜ್ಞಾನಂದ ಅವರನ್ನು ಹೊಗಳಿದ್ದಾರೆ.

       ‘ಫಿಡೆ ವಿಶ್ವಕಪ್​ನಲ್ಲಿ ತೋರಿದ ಅಮೋ ನಿರ್ವಹಣೆಗಾಗಿ ಪ್ರಜ್ಞಾನಂದ ಬಗ್ಗೆ ನಮಗೆ ಹೆಮ್ಮೆ ಇದೆ. ಅಪೂರ್ವವಾದ ಕೌಶಲ ಪ್ರದರ್ಶಿಸಿದ್ದಲ್ಲದೆ, ಫೈನಲ್​ನಲ್ಲಿ ಮ್ಯಾಗ್ನಸ್​ ಕಾರ್ಲ್​ಸೆನ್​ಗೆ ಕಠಿಣ ಸ್ಪರ್ಧೆಯೊಡ್ಡಿದರು. ಇದೇನು ಸಣ್ಣ ಸಾಧನೆಯಲ್ಲ. ಮುಂಬರುವ ಟೂರ್ನಿಗಳಿಗೆ ಶುಭವಾಗಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್​ನಲ್ಲಿ ಶ್ಲಾಘಿಸಿದ್ದಾರೆ.

      ‘ಅದ್ಭುತವಾದ ಟೂರ್ನಿಗಾಗಿ ಪ್ರಜ್ಞಾನಂದಗೆ ಅಭಿನಂದನೆಗಳು. ನಿನ್ನ ಕನಸುಗಳನ್ನು ಹಿಂಬಾಲಿಸುವುದನ್ನು ಮತ್ತು ಭಾರತಕ್ಕೆ ಹೆಮ್ಮೆ ತರುವುದನ್ನು ಮುಂದುವರಿಸು’ ಎಂದು ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಹೊಗಳಿದ್ದಾರೆ. ‘ಪ್ರಜ್ಞಾನಂದ, ನೀವು ಎಂದಿನಂತೆಯೇ ಈ ಸಲವೂ ನಮಗೆ ಹೆಮ್ಮೆ ತಂದಿದ್ದೀರಿ’ ಎಂದು ಕ್ರಿಕೆಟಿಗ ಆರ್​. ಅಶ್ವಿನ್​ ಮೆಚ್ಚಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap