ಬೆಂಗಳೂರು:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಈಗಾಗಲೇ ಪರಪ್ಪನ ಅಗ್ರಹಾರ ಸೇರಿದ್ದಾರೆ. ನಿನ್ನೆ ಕೋರ್ಟ್ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಗೆ ಆದೇಶ ನೀಡಿದೆ.
ಇನ್ನು ಈ ಪ್ರಕರಣ ಸಂಬಂಧ ಪೊಲೀಸ್ ತನಿಖೆ ಮುಂದುವರೆದಿದೆ. ಇದೀಗ ಪೊಲೀಸರಿಗೆ ದರ್ಶನ್ ವಿರುದ್ಧ ಪ್ರಬಲ ಸಾಕ್ಷಿ ದೊರೆತಿದೆ ಎನ್ನಲಾಗುತ್ತಿದ್ದು, ದರ್ಶನ್ ಪೋನ್ ನಿಂದ ಮಹತ್ವದ ಸಾಕ್ಷಿಯನ್ನು ಪಡೆದೊಕೊಳ್ಳಲಾಗಿದೆ.
ಶೆಡ್ ನಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಬಳಿಕ ದರ್ಶನ್ ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದಾರೆ. ಬಳಿಕ ಮೆಸೆಜ್ ನ್ನು ಡಿಲೀಟ್ ಮಾಡಲಾಗಿದೆ ಎನ್ನಲಾಗುತ್ತಿದ್ದು, ಈ ಸಂಬಂಧ ಎಫ್‌ಎಸ್‌ಎಲ್‌ಗೆ ಹೆಚ್ಚಿನ ತನಿಖೆ ವಹಿಸಲಾಗಿತ್ತು ಈಗ ಅವರಿಂದ ಪೊಲೀಸರಿಗೆ ಮತ್ತೊಂದು ಸಾಕ್ಷಿ ದೊರೆತಿದೆ.
ಆದರೆ ಆರೋಪಿಗಳು ಕೊಲೆ ಬಳಿಕ ಮೆಸೆಜ್ ಗಳನ್ನು ಡಿಲಿಟ್ ಮಾಡಿದ್ದರು. ಪವಿತ್ರಾ ಗೌಡ ಮನೆಯಲ್ಲಿ ದೊರೆತ ಲ್ಯಾಪ್ ಟಾಪ್ ನಿಂದ ಸಂದೇಶ ರವಾನೆಯಾಗಿದೆ ಎಂಬ ಮಾಹಿತಿ ದೊರೆತಿದ್ದು ಈ ಸಂಬಂಧ ಪೊಲೀಸರು ಸ್ಕ್ರೀನ್ ಮಿರರ್ ಮಾಡಲು ಮುಂದಾಗಿದ್ದಾರೆ. ಸ್ಕ್ರೀನ್ ಮಿರರ್ ನಿಂದ ಡಿಲಿಟ್ ಆದ ಮೆಸೆಜ್ ರಿಟ್ರೀವ್ ಮಾಡಬಹುದು. ಇದರಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಪ್ರಮುಖ ಸಾಕ್ಷಿ ದೊರೆತಂತಾಗುತ್ತದೆ.