ಒಂದು ವೇಳೆ ಆತನಿಗೆ ಅನಿವಾರ್ಯವಾಗಿ ಒಂದು ದಿನ ಬರಲಾಗದೇ ಇದ್ದರೆ ಮೊದಲೇ ಬೇರೊಬ್ಬ ವ್ಯಕ್ತಿ ಬರುವುದಾಗಿ ಒಪ್ಪಿಗೆ ಪಡೆದು ಈ ಮೊದಲೇ ನಿಗದಿತ ವ್ಯಕ್ತಿಗೆ ನೀಡಲಾಗಿದ್ದ ಐಡಿ ಕಾರ್ಡ್ ತೆಗೆದುಕೊಂಡು ಬರಬೇಕಾಗುತ್ತದೆ. ಇದರಿಂದ ಜೈಲಿನಲ್ಲಿ ಕೈದಿಗೆ ನೀಡಲಾಗುವ ಊಟೋಪಚಾರದ ಖರ್ಚು ವೆಚ್ಚವೇನೋ ಕಡಿಮೆಯಾಗುತ್ತದೆ. ಜೊತೆಗೆ ಆಹಾರದಿಂದ ಅನಾರೋಗ್ಯವಾದರೆ ಜೈಲು ಅಧಿಕಾರಿಗಳು ಹೊಣೆಯಾಗಿರುವುದಿಲ್ಲ.
ಆದರೆ ಮನೆ ಊಟ ಎಂಬ ಮಾತ್ರಕ್ಕೆ ದರ್ಶನ್ ಗೆ ಪ್ರತಿನಿತ್ಯ ಬಾಡೂಟ ಅಂತೂ ಸಿಗಲ್ಲ. ಯಾವುದೇ ಕೈದಿಗೂ ಮನೆ ಊಟ ಎಂದರೆ ಅಧಿಕ ಕೊಬ್ಬಿನಂಶವಿರುವ ಅಂದರೆ ಮಾಂಸಾಹಾರದ ಊಟ ತಂದುಕೊಡಲು ಅವಕಾಶವಿಲ್ಲ. ಜೈಲಿನ ನಿಯಮದ ಪ್ರಕಾರವೇ ಇಂತಿಷ್ಟೇ ಆಹಾರವನ್ನು ಮಾತ್ರ ಮನೆಯಿಂದ ತಂದುಕೊಡಬಹುದಾಗಿದೆ. ಅದೂ ಜೈಲಿನಲ್ಲಿ ಅನುಮತಿಸಲಾದ ಆಹಾರವನ್ನಷ್ಟೇ ಕೊಡಬಹುದಾಗಿದೆ. ಇಷ್ಟೆಲ್ಲಾ ಮಾಡಬೇಕಾದರೆ ಕೋರ್ಟ್ ಅನುಮತಿ ಕಡ್ಡಾಯವಾಗಿ ಬೇಕಾಗುತ್ತದೆ.
