ಲಂಡನ್‌ ಬೀದಿಯಲ್ಲಿ ಬಾಲಿವುಡ್‌ ಹಾಡಿಗೆ ಜಬರ್ದಸ್ತ್‌ ಸ್ಟೆಪ್ಸ್‌ ಹಾಕಿದ ಯುವತಿ

ಲಂಡನ್

     ಕೆಲವರಿಗೆ ಡ್ಯಾನ್ಸ್‌ ಮಾಡೋದು, ಕುಣಿಯೋದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಒಂಚೂರು ಹಾಡು ಕೇಳಿಸಿದ್ರೂ ನಡುರಸ್ತೆಯಲ್ಲಿಯೇ ಬೇಕಾದ್ರೂ ಡ್ಯಾನ್ಸ್‌ ಮಾಡ್ತಾರೆ. ಹೀಗೆ ಬೀದಿ ಬದಿಯಲ್ಲಿಯೇ ಮಸ್ತ್‌ ಆಗಿ ಡ್ಯಾನ್ಸ್‌ ಮಾಡಿ ಗಮನ ಸೆಳೆದವರನ್ನು ನೋಡಿರುತ್ತೀರಿ ಅಲ್ವಾ. ಜೊತೆಗೆ ಇಂತಹ ಸಾಕಷ್ಟು ನೃತ್ಯ ಸಂಬಂಧಿ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ಹರಿದಾಡುತ್ತಿದ್ದು, ಭಾರತೀಯ ಯುವತಿಯೊಬ್ಬಳು ಲಂಡನ್‌  ಬೀದಿಯಲ್ಲಿ ಅಪರಿಚಿತ ಯುವಕನ ಜೊತೆ ಬಾಲಿವುಡ್‌ ಹಾಡೊಂದಕ್ಕೆ ಸಖತ್ತಾಗಿ ಡ್ಯಾನ್ಸ್‌ ಮಾಡಿದ್ದಾಳೆ. ಈ ದೃಶ್ಯ ಭಾರೀ ವೈರಲ್‌ ಆಗಿದ್ದು, ಇವರಿಬ್ಬರ ಜಬರ್ದಸ್ತ್‌ ಡ್ಯಾನ್ಸ್‌ ಸ್ಟೆಪ್ಸ್‌ಗೆ ನೃತ್ಯ ಪ್ರಿಯರು ಫುಲ್‌ ಫಿದಾ ಆಗಿದ್ದಾರೆ.

 ‌   ಬಾಜಿರಾವ್ ಮಸ್ತಾನಿ ಸಿನೆಮಾದ ಮಲ್ಹಾರಿ ಹಾಡಿಗೆ ಯಾರು ಬೇಕಾದ್ರೂ ಫುಲ್‌ ಜೋಷ್‌ ಅಲ್ಲಿ ಡ್ಯಾನ್ಸ್‌ ಮಾಡ್ತಾರೆ. ಇದೀಗ ಭಾರತೀಯ ಯುವತಿಯೊಬ್ಬಳು ಲಂಡನ್‌ ಬೀದಿಯಲ್ಲಿ ಈ ಮಲ್ಹಾರಿ ಹಾಡಿಗೆ ಮಸ್ತ್‌ ಆಗಿ ಡ್ಯಾನ್ಸ್‌ ಮಾಡಿದ್ದಾಳೆ. ಹೌದು ಲಂಡನ್‌ನ ಪಿಕ್ಕಡಿಲಿ ಸರ್ಕಸ್‌ನಲ್ಲಿ ರಿಧಿಮಾ ಎಂಬ ಭಾರತೀಯ ಮೂಲದ ಯುವತಿ ಅಪರಿಚಿತ ವ್ಯಕ್ತಿಯ ಜೊತೆಗೆ ಮಲ್ಹಾರಿ ಹಾಡಿಗೆ ಭರ್ಜರಿಯಾಗಿ ನೃತ್ಯ ಮಾಡಿದ್ದಾಳೆ. ಇವರಿಬ್ಬರ ಡ್ಯಾನ್ಸ್‌ ಪರ್ಫಾರ್ಮೆನ್ಸ್‌ಗೆ ಅಲ್ಲಿ ನೆರೆದಿದ್ದವರು ಫುಲ್‌ ಫಿದಾ ಆಗಿದ್ದಾರೆ.

    ಈ ವಿಡಿಯೋವನ್ನು ರಿಧಿಮಾ   ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “30 ರಿಂದ 40 ಜನ ಪ್ರೇಕ್ಷರಿಂದ ತುಂಬಿದ್ದ ಪಿಕ್ಕಾಡಿಲಿ ಸರ್ಕಸ್‌ನಲ್ಲಿ ಎಲ್ಲರ ಮುಂದೆ ಅಪರಿಚಿತ ವ್ಯಕ್ತಿಯ ಜೊತೆ ಡ್ಯಾನ್ಸ್‌ ಮಾಡುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

   ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ರಿಧಿಮಾ ಲಂಡನ್‌ ಬೀದಿಯಲ್ಲಿ ನೆರೆದಿದ್ದ ಜನರ ಮುಂದೆ ಅಪರಿಚಿತ ಯುವಕನ ಜೊತೆ ಮಲ್ಹಾರಿ ಹಾಡಿಗೆ ಜಬರ್ದಸ್ತ್‌ ಆಗಿ ಡ್ಯಾನ್ಸ್‌ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಇವರಿಬ್ಬರ ಚಿಂದಿ ಡ್ಯಾನ್ಸ್‌ಗೆ ನೆರೆದಿದ್ದ ಜನ ಫುಲ್‌ ಫಿದಾ ಆಗಿದ್ದಾರೆ. 

   ಫೆಬ್ರವರಿ 24 ರಂದು ಶೇರ್‌ ಮಾಡಲಾದ ಈ ವಿಡಿಯೋ 1.3 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಹುಡುಗಿಯ ಚಿಂದಿ ಡ್ಯಾನ್ಸ್‌ಗೆ ನಾನಂತೂ ಫುಲ್‌ ಫಿದಾ ಆದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ಎಂತಹ ಎನರ್ಜಿ ನೋಡಿʼ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮ್ಮಿಬ್ಬರ ನೃತ್ಯ ಸಿಕ್ಕಾಪಟ್ಟೆ ಇಷ್ಟವಾಯ್ತುʼ ಎಂದು ಹೇಳಿದ್ದಾರೆ.