ಚಿತ್ರದುರ್ಗ :
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಬಂಧನವಾಗಿತ್ತು.. ಸುದೀರ್ಘ ಸಮಯದ ನಂತರ ದರ್ಶನ್ ಅವರಿಗೆ ಮಧ್ಯಂತರ ಬೇಲ್ ಸಿಕ್ಕಿದೆ.. ಈ ವಿಚಾರ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಖುಷಿ ನೀಡಿದೆ. ಇದೀಗ ಈ ಕುರಿತು ಮೃತ ರೇಣುಕಾಸ್ವಾಮಿ ತಂದೆ ಮಾತನಾಡಿದ್ದಾರೆ..
ಕಾನೂನು ವ್ಯವಸ್ಥೆಯಲ್ಲಿ ಜಾಮೀನು ಸಿಕಿದೆ.. ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ.. ಪೊಲೀಸರ ಮೇಲೆ ನಂಬಿಕೆ ಇದೆ.. ಆರೋಗ್ಯದ ವಿಚಾರವಾಗಿ ದರ್ಶನ್ ಅವರಿಗೆ ಬೇಲ್ ಸಿಕ್ಕಿದೆ.. ಆದರೆ, ನಮಗೆ ತಪ್ಪಿತಸ್ತರಿಗೆ ಶಿಕ್ಷೆ ಆಗುತ್ತೆ ಎನ್ನುವ ವಿಶ್ವಾಸವಿದೆ.. ದೇವಸ್ಥಾನಕ್ಕೆ ಹೋಗಿದ್ವಿ ಹಾಗೆ ಮೊಮ್ಮಗನನ್ನ ನೋಡೋಕೆ ಬಂದ್ವಿ ಅಂತ ರೇಣುಕಾಸ್ವಾಮಿ ತಂದೆ ಹೇಳಿದರು.
ಇನ್ನು ನಟ ದರ್ಶನ್ ಅವರಿಗೆ 6 ವಾರಗಳ ಮಧ್ಯಂತರ ಜಾಮೀನು ಮಂಜೂರಾಗಿದೆ. ಆದರೆ ಕೋರ್ಟ್ ಆದೇಶ ಬಳ್ಳಾರಿ ಜೈಲಿಗೆ ತಲುಪಿ, ಕಾನೂನು ಪ್ರಕ್ರಿಯೆ ಸಂಜೆ 5 ಗಂಟೆ ವೇಳೆಗೆ ಮುಕ್ತಾಯವಾದರೆ ಮಾತ್ರ ದರ್ಶನ್ ಇಂದೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.. ಆದರೆ ಏನಾಗುತ್ತೆ ಅಂತ ಕಾಯ್ದು ನೋಡಬೇಕಿದೆ..
ನಟ ದರ್ಶನ್‌ಗೆ ನೀಡಲಾಗಿರುವ ಮಧ್ಯಂತರ ಜಾಮೀನಿಗೆ ಹೈಕೋರ್ಟ್ ಸಾಕಷ್ಟು ಷರತ್ತುಗಳನ್ನು ವಿಧಿಸಿದೆ. 6 ವಾರಗಳ ಮಧ್ಯಂತರ ಜಾಮೀನು ಇದಾಗಿದ್ದು, ಚಿಕಿತ್ಸೆಗಾಗಿ ಜಾಮೀನು ನೀಡಲಾಗಿದೆ. ಅಲ್ಲದೆ ದರ್ಶನ್ ಪಾಸ್‌ಪೋರ್ಟ್ ಅನ್ನು ಕೋರ್ಟ್ ಸುಪರ್ದಿಗೆ ನೀಡಬೇಕು ಎಂದು ಹೇಳಿದೆ, ಅಲ್ಲದೆ, ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಸೂಚಿಸಿದೆ.