ಬೆಂಗಳೂರು
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ನಟ ದರ್ಶನ್ ಮತ್ತು ಪಟಾಲಂ ಗ್ಯಾಂಗ್ ಜೈಲು ಸೇರಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಆರೋಪಿಗಳ ಮನೆಯಲ್ಲಿ ಸಿಕ್ಕ 70,00,000 ರೂಪಾಯಿ ಹಣದ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ಪೊಲೀಸರು ಪತ್ರ ಬರೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಕೊಲೆಯ ನಂತರ ಶವ ಸಾಗಾಟಕ್ಕೆ ನಟ ದರ್ಶನ್ 30,00,000 ರೂಪಾಯಿ ನೀಡಿದ್ದರು ಎನ್ನುವ ಮಾಹಿತಿಯೊಂದು ಇತ್ತೀಚೆಗಷ್ಟೇ ಬಟಾಬಯಲಾಗಿತ್ತು. ಈಗಾಗಲೇ ಆರೋಪಿಗಳ ಮನೆಯಲ್ಲಿ ಒಟ್ಟು 70,00,000 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಕೋರಿ ಐಟಿ ಇಲಾಖೆಗೆ ಪೊಲೀಸರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಜೂನ್ 19 ರಂದು ಆರ್.ಆರ್ ನಗರದ ದರ್ಶನ್ ಮನೆಯಲ್ಲಿ 37,40,000 ರೂಪಾಯಿ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3,00,000 ರೂಪಾಯಿ ಪೊಲೀಸರು ವಶಕ್ಕೆ ಪಡೆದಿದ್ದರು. ಉಳಿದ ಹಣ ಆರೋಪಿಗಳ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಆದ್ದರಿಂದ ಈ ಬಗ್ಗೆ ಪೊಲೀಸರು ತನಿಖೆ ನಡೆಸುವಂತೆ ಐಟಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಟೀಂ ಬೆಂಗಳೂರು ಸೆಂಟ್ರಲ್ ಜೈಲು (ಪರಪ್ಪನ ಅಗ್ರಹಾರ ಜೈಲು) ಸೇರಿದ್ದಾರೆ. ಇನ್ನು ನಟ ದರ್ಶನ್‌ನನ್ನು ನೋಡಲು ಆಪ್ತರು, ಕುಟುಂಬದವರು ಬರುತ್ತಲೇ ಇದ್ದಾರೆ. ಇನ್ನು ವಿಜಯಲಕ್ಷ್ಮಿ ತನ್ನ ಮಗ ವಿನೀಶ್ ಜೊತೆ ಪತಿ ದರ್ಶನ್‌ನ್ನು ನೋಡಲು ಬಂದಿದ್ದು, ಈ ವೇಳೆ ಮಾಧ್ಯಮದವರನ್ನು ಕಂಡು ವಾಪಾಸ್ ಆಗಿದ್ದಾರೆ. ಈ ಘಟನೆ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಅವರು ಜೈಲಿನ ಬಳಿ ಬಂದಿದ್ದರು. ಆದರೆ ಜೈಲಿನ ಮುಂದೆ ಮಾಧ್ಯಮಗಳ ಕ್ಯಾಮೆರಾಗಳನ್ನು ಕಂಡ ತಕ್ಷಣ ಅವರು ಅಲ್ಲಿಂದ ವಾಪಾಸ್ ಕಾಲ್ಕಿತ್ತ ಘಟನೆ ನಡೆದಿದೆ.
ಬಳಿಕ ಮತ್ತೆ ಬೇರೆ ಕಾರಿನ ಮಗ ವಿನೀಶ್ ಜೊತೆ ಬಂದು ಪತಿ ದರ್ಶನ್‌ನನ್ನು ಭೇಟಿ ಮಾಡಿದ್ದರು. ಈ ವೇಳೆ ಮಗನನ್ನು ಕಂಡು ತಬ್ಬಿಕೊಂಡು ದರ್ಶನ್ ಕಣ್ಣೀರಿಟ್ಟಿದ್ದರು ಎಂದು ತಿಳಿದುಬಂದಿತ್ತು.
ಇನ್ನು ಈ ಪ್ರಕರಣದಲ್ಲಿ ನಟ ದರ್ಶನ್ ಎ2 ಆಗಿದ್ದು, ಅವರಿಗೆ ಕಾನೂನಿನ ಸಂಕಷ್ಟ ದಿನದಿಂದ ದಿನಕ್ಕೆ ಉರುಳಾಗುತ್ತಲೇ ಇದೆ. ಅನ್ನಪೂರ್ಣೇಶ್ವರಿನಗರ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ವಿಚಾರಣೆ ತೀವ್ರ ಆದಂತೆಲ್ಲ ಅನೇಕ ಸ್ಫೋಟಕ ವಿಚಾರಗಳು ಹೊರಬರುತ್ತಲೇ ಇವೆ. ಈ ಪ್ರಕರಣದಲ್ಲಿ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾಳೆ. ಇನ್ನು ಇವರ ಪಟಾಲಂ ಗ್ಯಾಂಗ್ ಕೂಡ ಬಧನಕ್ಕೊಳಗಾಗಿದ್ದು, ಇವರ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ