ವಿಜಯನಗರ / ಹೊಸಪೇಟೆ :
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವಾಗಲೇ ಡೆವಿಲ್ ಸಿನಿಮಾದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದೆ. ಇನ್ನೂ ಡೆವಿಲ್ ಅಬ್ಬರಿಸೋಕೆ ಕೆಲವೇ ದಿನಗಳು ಬಾಕಿ ಇದೆ. ಫ್ಯಾನ್ಸ್ ಅಂತೂ ಹಬ್ಬ ಮಾಡೋಕೆ ರೆಡಿ ಆಗಿ ನಿಂತಿದ್ದಾರೆ. ಇದೀಗ ಕಲ್ಟ್ ಸಿನಿಮಾ ಪ್ರಚಾರದಲ್ಲಿರುವ ಎಂದ ನಟ ಝೈದ್ ಖಾನ್ ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ಕಲ್ಟ್ ಪ್ರಚಾರದಲ್ಲಿ ಝೈದ್ ಖಾನ್
ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಅವರ ಮೊದಲ ಸಿನಿಮಾ ಬನಾರಸ್ ಗೆ ನಟ ದರ್ಶನ್ ಬಹಳಷ್ಟು ಸಾಥ್ ನೀಡಿದ್ದರು. ಇದೀಗ ಝೈದ್ ಖಾನ್ ನಟನೆಯ ಎರಡನೇ ಸಿನಿಮಾ ಕಲ್ಟ್ ಚಿತ್ರೀಕರಣ ಮುಗಿದಿದೆ ಹಾಗೆಯೇ ಬಿಡುಗಡೆ ಹಂತಕ್ಕೆ ಬಂದಿದೆ. ಹೀಗಾಗಿ ಸಿನಿಮಾದ ಪ್ರಚಾರದಲ್ಲಿ ಝೈದ್ ಖಾನ್ ಬ್ಯುಸಿಯಾಗಿದ್ದಾರೆ.
ಜನವರಿ 23ರಂದು ಕಲ್ಟ್ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆ ನಟ ಝೈದ್ ಖಾನ್ ಪ್ರಚಾರಕ್ಕಾಗಿ ಹೊಸಪೇಟೆಗೆ ಆಗಮಿಸಿದ್ದರು. ಈ ಸಮಯದಲ್ಲಿ ದರ್ಶನ್ ಅವರನ್ನು ನೆನಪಿಸಿಕೊಂಡು ಕೆಲವೊಂದು ಮಾತುಗಳನ್ನು ಆಡಿದ್ದಾರೆ. ಕಲ್ಟ್ ಸಿನಿಮಾ ರಿಲೀಸ್ ಆಗುವ ಒಳಗಡೆ ನಟ ದರ್ಶನ ಅವ್ರು ಜೈಲಿಂದ ಹೊರಗೆ ಬರ್ತಾರೆ ಅನ್ನೋ ನಿರೀಕ್ಷೆ ನನಗಿದೆ ಎಂದಿದ್ದಾರೆ.
ನನ್ನ ಅಣ್ಣನ ಸ್ಥಾನದಲ್ಲಿ ದರ್ಶನ್
ದರ್ಶನ ಅಣ್ಣ ಆದಷ್ಟು ಬೇಗ ಜೈಲಿಂದ ಹೊರಗೆ ಬರ್ಲಿ ಅಂತಾ ಪ್ರತಿ ದಿನ ಪ್ರತಿ ಕ್ಷಣ ಪ್ರಾರ್ಥನೆ ಮಾಡ್ತಾ ಇದ್ದೇನೆ. ದರ್ಶನ ಅವ್ರನ್ನ ನಾನು ಬಾಯಿ ಮಾತಿನಿಂದ ಅಣ್ಣ ಅಂತಾ ಕರೆಯೋಲ್ಲ ಹೊರತಾಗಿ ನಿಜ ಜೀವನದಲ್ಲಿ ನಂಗೆ ಅಣ್ಣ ಅಂತಾ ಯಾರು ಇಲ್ಲ.ಆ ಜಾಗವನ್ನ ದರ್ಶನ ಅವ್ರು ತುಂಬಿಕೊಂಡು ಕರ್ತವ್ಯ ನಿರ್ವಹಿಸಿದರು. ಅವ್ರು ಈಗ ಜೈಲಲ್ಲಿ ಇರೋದು ಬೇಜಾರಾಗುತ್ತೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ನನ್ನ ಮೊದಲನೇ ಸಿನಿಮಾದ ಸಮಯದಲ್ಲಿ ನನಗೆ ಅಣ್ಣನ ಹಾಗೇ ದರ್ಶನ ಅವ್ರು ಬೆನ್ನೆಲುಬಾಗಿ ನಿಂತಿದ್ರು. ಈಗ ಎರಡನೇ ಸಿನಿಮಾ ವೇಳೆ ಇಲ್ಲದೇ ಇರೋದು ಬಹಳ ಬೇಜಾರಾಗಿದೆ. ಅವ್ರು ಇದ್ದಿದ್ರೆ ನಂಗೆ ಎನರ್ಜಿ ಜಾಸ್ತಿಯಾಗಿರುತ್ತಿತ್ತು.
ಜೈಲಿಗೆ ಭೇಟಿ ಕೊಡಲೇ ಇಲ್ಲ
ಇಲ್ಲಿಯವರೆಗೂ ನಾನು ದರ್ಶನ ಅವರನ್ನ ಜೈಲಿಗೆ ಹೋಗಿ ಭೇಟಿ ಆಗಿರಲಿಲ್ಲ. ಸಿನಿಮಾ ರಿಲೀಸ್ ಒಳಗೆ ದರ್ಶನ ಅವ್ರು ಹೊರಗೆ ಬರ್ತಾರೆ ಅನ್ನೋ ನಿರೀಕ್ಷೆ ಇದೆ. ಬರಲಿಲ್ಲ ಅಂದ್ರೆ ನಾನೇ ಪರ್ಮಿಶನ್ ತೆಗೆದುಕೊಂಡು ಜೈಲಿಗೆ ಹೋಗಿ ದರ್ಶನ ಭೇಟಿ ಮಾಡುವೆ,ಅವರ ಆಶೀರ್ವಾದ ತೆಗೆದುಕೊಂಡು ಕಲ್ಟ್ ಸಿನಿಮಾ ರಿಲೀಸ್ ಮಾಡ್ತೀನಿ ಎಂದಿದ್ದಾರೆ.








