ತಾಯಿ ಮತ್ತು ಪತ್ನಿ ಭೇಟಿಗೆ ಮನವಿ ಮಾಡಿದ ದಾಸ….!

ಬಳ್ಳಾರಿ

   ನಟ ದರ್ಶನ್​ ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಎ2 ಆಗಿದ್ದು, ಅವರ ವಿರುದ್ಧ ನೂರಾರು ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಚಾರ್ಜ್​ಶೀಟ್​ನಲ್ಲಿನ ವಿವರಗಳು ನಿಜಕ್ಕೂ ಶಾಕಿಂಗ್​ ಆಗಿವೆ. ಬೆಂಗಳೂರಿನಲ್ಲಿ ಚಾರ್ಜ್​ಶೀಟ್​ ಸಲ್ಲಿಕೆ ಆಗುತ್ತಿದ್ದಂತೆಯೇ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಅವರು ಕುಟುಂಬದವರ ಭೇಟಿಗೆ ಮನವಿ ಮಾಡಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಫ್ಯಾಮಿಲಿ ಜೊತೆ ಮಾತನಾಡಲು ಅವರು ಬಯಸಿದ್ದಾರೆ.

   ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿದಿದೆ. 3991 ಪುಟಗಳು ಇರುವ ಜಾರ್ಜ್​ಶೀಟ್​ ಸಲ್ಲಿಕೆ ಮಾಡಲಾಗಿದೆ. ಆರೋಪಗಳು ಗಂಭೀರ ಆಗಿರುವುದರಿಂದ ದರ್ಶನ್​ಗೆ ಜಾಮೀನು ಸಿಗುವುದು ಕಷ್ಟ ಇದೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಕೇವಲ 5 ನಿಮಿಷ ಫೋನ್​ ಕಾಲ್​ನಲ್ಲಿ ಮಾತನಾಡಲು ದರ್ಶನ್​ಗೆ ಸಾಧ್ಯವಾಗಿಲ್ಲ. ಆದ್ದರಿಂದ ಪತ್ನಿ ಮತ್ತು ತಾಯಿ ಜೊತೆ ನೇರವಾಗಿ ಮಾತನಾಡಲು ಅವರು ತೀರ್ಮಾನಿಸಿದ್ದಾರೆ. 

   ನಾಳೆಯೇ  ಜೈಲಿಗೆ ಬರುವಂತೆ ಪತ್ನಿಗೆ ದರ್ಶನ್​ ತಿಳಿಸಿದ್ದಾರೆ. ಈ ಬಗ್ಗೆ ದರ್ಶನ್ ಕುಟುಂಬಸ್ಥರು ಬಳ್ಳಾರಿಯ ಜೈಲಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮತ್ತು ತಾಯಿ ಮೀನಾ ಕೂಡ ಬರುವುದಾಗಿ ಮಾಹಿತಿ ನೀಡಿದ್ದಾರೆ. ದರ್ಶನ್​ ಕುಟುಂಬದವರು ಸಂಜೆ 4 ಗಂಟೆಯ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರುವ ಸಾಧ್ಯತೆ ಇದೆ.

 

Recent Articles

spot_img

Related Stories

Share via
Copy link
Powered by Social Snap