ಮಧುಗಿರಿ :-
ಇತಿಹಾಸ ಪ್ರಸಿದ್ಧ ಬಂದ್ರೇಹಳ್ಳಿ ಶ್ರೀ ಮೀನುಗೊಂದಿ ಮಲೆ ರಂಗನಾಥ ಸ್ವಾಮಿ ದೇವಸ್ಥಾನದ 9 ಮಂದಿ ಬುಡಕಟ್ಟಿನ ಅಣ್ಣತಮ್ಮಂದಿರಿಗೆ ಪುಟ್ಟಮ್ಮ ಎಂಬುವರು ಮನ್ಸ್ಪೂರ್ವಕವಾಗಿ ದಾಸೋಹದ ಅನುಕೂಲಕ್ಕಾಗಿ 1.5 ಲಕ್ಷ ರೂ ಮೌಲ್ಯದ ದಾಸೋಹಕ್ಕೆ ಪಾತ್ರೆ ಸಾಮಗ್ರಿಗಳನ್ನು ಉಚಿತವಾಗಿ ನೀಡಿದ್ದಾರೆ.
ಮಧುಗಿರಿ ತಾಲೂಕಿನ ಬಂದ್ರೆ ಹಳ್ಳಿ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ಮೀನಗೊಂಧಿ ಮಲೆ ರಂಗನಾಥ ಸ್ವಾಮಿ ಶ್ರಾವಣ ಮಾಶೋತ್ಸವದ ಪ್ರಯುಕ್ತ ಪುಟ್ಟಮ್ಮ ಎಂಬುವರು 9 ಮಂದಿ ಬುಡ್ಕಟ್ಟಿನ ದಾಸೋಹಕ್ಕೆ 1.5 ಲಕ್ಷ ಮೌಲ್ಯದ ಪಾತ್ರೆ ಸಮಗ್ರಗಳನ್ನ ಉಚಿತವಾಗಿ ವಿತರಣೆ ನೀಡಿ ಶುಭ ಹಾರೈಸಿದರು.
ದಾನಿಗಳಾದ ಪುಟ್ಟಮ್ಮ ಮಾತನಾಡಿ ಶ್ರೀ ಮೀನ ಗೊಂದಿ ಮಲೆ ರಂಗನಾಥ ಸ್ವಾಮಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ತಾಲೂಕು ಜಿಲ್ಲೆ ಹೊರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಭಕ್ತಾದಿಗಳನ್ನು ಹೊಂದಿರುವ ರಂಗನಾಥ ಸ್ವಾಮಿಗೆ ಒಂಬತ್ತು ಮಂದಿ ಬುಡ್ಕಟ್ಟಿನ ಅಣ್ಣ ತಮ್ಮಂದಿರ ಕೊಡುಗೆ ಅಪಾರವಾಗಿದೆ, ಬ್ರಹ್ಮ ರಥೋತ್ಸವ ಇದೇ 9 ಮಂದಿ ಬುಡ್ಕಟ್ಟಿನವರು ಆಯೋಜಿಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ದೇವಸ್ಥಾನ ಅಭಿವೃದ್ಧಿ ಕಾಣಲಿ ನಿಮ್ಮಗಳ ಅಭಿವೃದ್ಧಿಯ ಜೊತೆಯಲ್ಲಿ ನಾವು ಕೈಜೋಡಿಸುತ್ತೇವೆ ಎಂದು ಒಂಬತ್ತು ಮಂದಿ ಬುಡ್ಕಟ್ಟಿನ ಅಣ್ಣ-ತಮ್ಮಂದಿರಿಗೆ ಭರವಸೆ ನೀಡಿದರು.
ಒಂಬತ್ತು ಮಂದಿ ಬುಡ್ಕಟಿನ ಲಕ್ಷ್ಮಿ ರಂಗಯ್ಯ ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸ ಇರುವ ರಂಗನಾಥ ಸ್ವಾಮಿಗೆ 9 ಮುಂದಿ ಬುಳ್ಕಟ್ಟಿನ ಅಣ್ಣ-ತಮ್ಮಂದಿರ ಸೇವೆ ಅವಿರತವಾಗಿ ನಡೆದುಕೊಂಡು ಬಂದಿದೆ ದೇವತಾ ಕಾರ್ಯ ಬ್ರಹ್ಮರಥೋತ್ಸವದ ಪೂರ್ಣ ಜವಾಬ್ದಾರಿಯನ್ನ ವಂಶ ಪಾರಂಪರ್ಯವಾಗಿ ಒಂಬತ್ತು ಮಂದಿ ಬುಡ್ಕಟ್ಟಿಗೆ ಬಂದಿರುವುದೇ ನಮ್ಮೆಲ್ಲರ ಪುಣ್ಯ ಪುಟ್ಟಮಜ್ಜಿ ಬಹಳ ದಿನಗಳಿಂದ ದೇವಸ್ಥಾನಗಳ ಅಭಿವೃದ್ಧಿಗೆ ಅದರಲ್ಲೂ ನಮ್ಮ ಮೇಲೆ ಇಟ್ಟಂತ ನಂಬಿಕೆ ಯಿಂದ ನಮಗೆ ಒಂದುವರೆ ಲಕ್ಷ ಮೌಲ್ಯದ ದಾಸೋಹಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅನ್ನ ಸಂತರ್ಪಣೆಗೆ ಬಳಕೆಯಾಗಲಿ ಎಂಬುವ ದೃಷ್ಟಿಯಿಂದ ಎಲ್ಲಾ ರೀತಿಯ ಪಾತ್ರೆ ಸಾಮಾಗ್ರಿಗಳನ್ನು ವಿತರಿಸಿದ್ದಾರೆ ರಿಗೆ ನಾವು 9 ಮಂದಿ ಬುಡಕಟ್ಟಿನಿಂದ ಸನ್ಮಾನಿಸಿ ಗೌರವಿಸಿದ್ದೇವೆ ಇವರ ಸಾರ್ಥಕತೆಯ ಜೀವನವನ್ನು ನಾವು ಜೀವನವಿಡಿ ಮರೆಯುವಂತಿಲ್ಲ ಎಂದು ಅಜ್ಜಿಯನ್ನ ಆಡಿ ಹೊಗಳಿಕೊಂಡಾಡಿದರು ಅಜ್ಜಿಯ ಸೇವೆ ಮತ್ತಷ್ಟು ದೊರಕಲಿದೆ ಎಂದರು .
ಶ್ರಾವಣ ಮಾಸದ ಪೂಜಾ ಕಾರ್ಯಕ್ರಮ ಮೊದಲನೇ ವಾರ ಬಹಳ ವಿಜೃಂಭಣೆಯಿಂದ ಆಯೋಜನೆಗೊಳಿಸಲಾಗಿ ಧರ್ಮ ಕರ್ತ ಕುಟುಂಬದಿಂದ ಶ್ರೀ ಮೀನ ಗೊಂದಿ ಮಲೆ ರಂಗನಾಥ ಸ್ವಾಮಿಗೆ ವಿಶೇಷವಾಗಿ ಬೆಣ್ಣೆ ಅಲಂಕಾರ ಸೇರಿದಂತೆ ದಾಸೋಹ ವ್ಯವಸ್ಥೆಯನ್ನ ಬಹಳ ವಿಜೃಂಭಣೆಯಿಂದ ಆಯೋಜಿಸಿದರು , ಸ್ವಾಮಿಯ ಪೂಜಾ ಕೈಂಕರ್ಯಗಳಲ್ಲಿ ಧರ್ಮಕರ್ತರಾದ ದೇವದಾಸ್, ಗೌಡ್ರು ಯಜಮಾನ್ರುಗಳಾದ ರಂಗನಾಥ್, ಕೃಷ್ಣಪ್ಪ, ರಂಗಣ್ಣ, ಚಂದ್ರು, ಶಾಂತರಾಮ್, ಅಶ್ವತಪ್ಪ, ಎ ಜಿ ತಿಮ್ಮಯ್ಯ ,ರಂಗಣ್ಣ, ವೇಣುಗೋಪಾಲ್, ಚಂದ್ರಶೇಖರ್, ರಂಗನಾಥಣ್ಣ, ದಾಸ್ ಗಿರಿಯಪ್ಪ, ಶ್ರೀನಿವಾಸ್, ಚಿಕ್ಕರಂಗಪ್ಪ, ಮಹೇಂದ್ರ ಸಮಾಜದ ಮುಖಂಡರುಗಳಾದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ತಿಮ್ಮಯ್ಯ, ಮಂಜಣ್ಣ, ಚಾಣಕ್ಯ, ಮಲೇ ರಂಗಯ್ಯ, ಗಿರೀಶ್, ರಂಗಧಾಮಯ್ಯ , ಲಾಯರ್ ತಿಮ್ಮರಾಜು, ಶಶಿ, ಆನಂದ್, ಹನುಮಂತ ರಾಜು, ಬಂದ್ರಹಳ್ಳಿ ರಂಗಣ್ಣ, ದಾಸೇಗೌಡರು, ರವಿಕುಮಾರ್, ಭೀಮಣ್ಣ, ಮಲ್ಲೇಶ್, ಗೋವಿಂದರಾಜು , ಮುದ್ದಣ್ಣ, ದೊಡ್ಡ ರಂಗಪ್ಪ, , ಯೋಗಣ್ಣ, ನಾಗರಾಜು, ರಂಗಮಯ ಎಲ್ಐಸಿ, ಮಧುಸೂದನ್ , ಹನುಮಂತ್ ರಾಯಪ್ಪ, ಪೂಜಾರ್ ನಾಗರಾಜು ಒಂಬತ್ತು ಮಂದಿ ಬುಡುಕಟ್ಟಿನ ಧರ್ಮ ಕರ್ತರು, ಕಟ್ಟೆ ಮನೆಯ ಯಜಮಾನರು, ಗೌಡ್ರು ಯಜಮಾನರು ಸೇರಿದಂತೆ ಸಾವಿರಾರು ಜನ ಭಕ್ತಾದಿಗಳು ಪಾಲ್ಗೊಂಡು ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.








