ಏಕಾಗ್ರತೆ ಮಾತ್ರ ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ

ದಾವಣಗೆರೆ:


ಸದೃಢ ದೇಹ ಮನಸ್ಸು ಏಕಾಗ್ರತೆ ನಮ್ಮದಾಗಿದ್ದಾಗ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಅದ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾಕ್ಟರ್ ಹೆಚ್ ಎಂದರು.

ಜ್ಞಾನ ಸಾಗರ ಪದವಿ ಪೂರ್ವ ಕಾಲೇಜ್ ಹಾಗೂ ಪ್ರಗ್ಯಾ ಐ.ಐ.ಟಿ.ಮೆಡಿಕಲ್ ಅಕಾಡೆಮಿ ಕಾಲೇಜಿನಲ್ಲಿ 2021 ನೇ ಸಾಲಿನ ಪ್ರಥಮ ಪಿ.ಯು.ಸಿ.ವಿದ್ಯಾರ್ಥಿಗಳಿಗೆ ಹಹಮ್ಮಿಕೊಂಡಿದ್ದ ಸ್ನೇಹ. ಬಂಧ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು.ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಾತ್ರ ನಾವು ಏನ್ನಾದರೂ ಸಾದಿಸಲು ಸಾದ್ಯ ಇಲ್ಲ ದಿದ್ದರೆ.ಜೀವನ ಪರ್ಯಂತ ಕೊರಗಬೇಕಾಗುತ್ತದೆ.. ಎಂದರು.ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕ್ಕೆ ಪೂರಕ ವಾತಾವರಣ ಕಲ್ಲಿಸಿದೆ.ಕಾಲೇಜು ಮತ್ತು ಒಳ್ಳೆಯ ಕಿರ್ತಿತರಬೇಕು ಎಂದರು..ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ .ಫೌಂಡರ್ ಆಫ್ ನೆಮ್ಮದಿ ಫೌಂಡೇಶನ್, ಡಾಕ್ಟರ್ ಲಕ್ಷಣರೆಡ್ಡಿ ಇವರು ಮಕ್ಕಳು ಅಮಾನವೀಯ ಮೌಲ್ಯ ಗಳನ್ನು ಅಳವಡಿಸಿಕೊಳಬೇಕು .

ಕಲಿಕೆಯ ಮತ್ತು ಗಳಿಕೆಯ ಇಚ್ಚೆ ಆಸಕ್ತಿ ಉತ್ಹಾಹ ಜೀವನ ಕ್ಕೆ ಎಷ್ಟು ಮಹತ್ವವೆಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ತಙ್ನರು ಹಾಗೂ ಜ್ಞಾನ ಸಾಗರ ಪದವಿಪೂರ್ವ ಕಾಲೇಜು ಕಾರ್ಯದರ್ಶಿ ಬಸವರಾಜ್ ಸಾಗರ್ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ. ಪ್ರಸ್ತುತ ಜೀವನದಲ್ಲಿ ಶಿಕ್ಷಣ ಅತ್ಯವಶ್ಯಕ ಆದುನಿಕರಣ ಜೀವನದಲ್ಲಿ ಶಿಕ್ಷಣ ಬಹುಮುಖ್ಯ .ಇದರ ಅವಶ್ಯಕತೆ ಬಗ್ಗೆ ವಿಧ್ಯಾರ್ಥಿಗಳಿಗೆ ಹೇಳಿದರು. ಶಿಕ್ಷಣವಿದ್ದರೆ ಜಗತ್ತಿನಲ್ಲಿ ಎಲ್ಲಿಬೇಕಾದರು ಜೀವನ ನಡೆಸಬಹುದು. ಆದುನಿಕ ಜಗತ್ತಿನಲ್ಲಿ ನಾವು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ .ಅದಕ್ಕೆ ನಾವು ಎದುರಿಸುವ ಮನೋಸ್ಥರ್ಯ ವಿದ್ಯಾರ್ಥಿಗಳಿಗೆ ಬೇಕಾಗುತ್ತದೆ.

ಆದ್ದರಿಂದ ನಾವುಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕಾಗುತ್ತದೆ.ಎಂದು ಹೇಳಿದರು. ಕಾರ್ಯಕ್ರಮದ ಲ್ಲಿ.ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನ ಕುಮಾರ್.ಕೆ.ಪ್ರಗ್ಯಾ ಅಕಾಡೆಮಿಯ ಕಾರ್ಯ ದರ್ಶಿ.ಸಂದೇಶ್.ಜಿ.ಆರ್.ನಿರ್ದೇಶಕ ರುಗಳಾದ ಸುಜೆಯ್.ಬಿ.ಟಿ. ಆಂಜಿನಪ್ಪ.ಹೆಚ್.ರಮೇಶ್.ಉಪನ್ಯಾಸಕರು ಗಳಾದ ದೀಪಿಕಾ. ನಿಸರ್ಗ.ಮಂಜುನಾಥ. ರೇವಣಸಿದ್ದಪ್ಪ.ವೆಂಕಟೇಶ್. ಹಾಗೂ ಬೋಧಕೇತರ ಸಿಬ್ಬಂದಿ ಬಸವರಸಜ್.ಎಂ.ಮುರುಗೇಶ್.ಮತ್ತು ವಿದ್ಯಾರ್ಥಿಗಳು .ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link