ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ತಾಲ್ಲೂಕಿನ ಕರ್ನಾಟಕ ರಾಜ್ಯ ಗ್ರಾಮೀಣ ಕೃಪಾಂಕ ನೌಕರರ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

0
15

ಹರಪನಹಳ್ಳಿ

       ಗ್ರಾಮೀಣ ಕೃಪಾಂಕ ಸೌಲಭ್ಯದೊಂದಿಗೆ ರಾಜ್ಯ ಸರ್ಕಾರಿ ನೌಕರರಾಗಿ ಸೇವೆಗೆ ಸೇರ್ಪಡೆಯಾಗಿರುವ ಎಲ್ಲಾ ನೌಕರರಿಗೆ ಸಾಮಾಜಿಕ ನ್ಯಾಯ ಒದಗಿಸುವಂತೆ ಗುರುವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

         1998 ರಿಂದ 2003 ರವರೆಗೆ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಯಾಗಿರುವ 5017 ನೌಕರರಿಗೆ ಸೇವೆಯನ್ನು ಸಂರಕ್ಷಿಸುವ ಮತ್ತು ಮರುನೇವiಕಾತಿ ಮಾಡುವಾಗ ಅವರ ಜಾಗದಲ್ಲಿ ನಗರ ಪ್ರದೇಶದ ಅಭ್ಯರ್ಥಿಗಳು ಬರದೇ ಇದ್ದ ಪಕ್ಷದಲ್ಲಿ ಗ್ರಾಮೀಣ ಅಭ್ಯರ್ಥಿಗಳನ್ನೇ ಮುಂದುವರಿಸುವ ಬದಲು ವಜಾಗೊಂಡಂತಹ ಎಲ್ಲಾ ನೌಕರರನ್ನು ವಿಶೇಷ ನೇಮಕಾತಿ ನಿಯಮದ ಮೂಲಕ ನೇಮಕಾತಿ ಮಾಡಲಾಯಿತು.

          ನೇಮಕಾತಿ ವೇಳೆ 1998-2003ರ ನಡುವಿನ ಸೇವೆಯನ್ನು ಪರಿಗಣಿಸದೇ 2003ರಿಂದ ಹೊಸ ನೇಮಕಾತಿ ಎಂಬುದಾಗಿ ಪರಿಗಣಿಸಿರುವುದು ದುರ್ದೈವಾಗಿದೆ. ಆದ್ದರಿಂದ ಈ ಅವಧಿಯಲ್ಲಿ ನೇಮಕವಾದ ನೌಕರರಿಗೆ ಐದು ವರ್ಷದ ಸೇವೆ ಇಲ್ಲದಂತಾಗಿದೆ. ಸೇವೆ ಸಲ್ಲಿಸಿದ ಸೇವೆಯನ್ನು ಕೇವಲ ರಜೆ ಮತ್ತು ಪಿಂಚಣಿಗೆ ಪರಿಗಣಿಸಲಾಗಿದೆ. ಅದ್ದರಿಂದ ಹಿಂದಿನ ಸೇವೆಯನ್ನು ಪರಿಗಣಿಸಿ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಮುಂದುವರಿಸಲು ಕ್ರಮ ಜರುಗಿಸಬೇಕು ಎಂದು ತಾಲ್ಲೂಕಿನ ಕರ್ನಾಟಕ ರಾಜ್ಯ ಗ್ರಾಮೀಣ ಕೃಪಾಂಕ ನೌಕರರ ವೇದಿಕೆ ಮನವಿ ಮಾಡಿದೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ, ಬಿ.ರಾಜಶೇಖರ ಹಾಗೂ ಇತರರು ಭಾಗವಹಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here