ದಾವಣಗೆರೆ : ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ದಾವಣಗೆರೆ:

   ನಗರದ ವಿವೇಕಾನಂದ ಬಡಾವಣೆಯ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ತಂದೆಯೊಂದಿಗೆ ಸೇರಿ ಮಕ್ಕಳೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

   ಮೃತ ಮಹಿಳೆಯನ್ನು ಸುಮಲತಾ ಎಂದು ಗುರುತಿಸಲಾಗಿದೆ. ಶಿವಮೂರ್ತಿ 12 ವರ್ಷಗಳ ಹಿಂದೆ ಮೊದಲನೇ ಪತ್ನಿ ಸಾವನ್ನಪ್ಪಿದ ನಂತರ ಸುಮಲತಾರನ್ನು ಮದುವೆಯಾಗಿದ್ದ. ಆದರೆ, ಸುಮಲತಾ ಅವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಪತಿಯ ಮೊದಲ ಪತ್ನಿಯ ಮೂವರು ಮಕ್ಕಳನ್ನೇ ತನ್ನ ಮಕ್ಕಳು ಎಂಬಂತೆ ಸಾಕಿ ಸಲುಹಿದ್ದರು ಎನ್ನಲಾಗಿದೆ.

   ಸುಮಾಲತಾ ತನ್ನ ಮಕ್ಕಳಂತೆ ಮೂವರನ್ನೂ ನೋಡಿಕೊಂಡಿದ್ದಳು. ಆದರೆ ಮಕ್ಕಳು ದೊಡ್ಡವರಾದ ಮೇಲೆ ಜಗಳ ಶುರುವಾಗಿದೆ. ಓರ್ವ ಸುಮಲತಾ ಜೊತೆ ಆರು ತಿಂಗಳು ಮಾತು ನಿಲ್ಲಿಸಿದ್ದ. ಮಕ್ಕಳು ದೊಡ್ಡವರಾದ ನಂತರ ಶಿವಮೂರ್ತಿಯು ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಹೀಗಾಗಿಯೇ ಎಲ್ಲರೂ ಸೇರಿ ಕೊಲೆ ಮಾಡಿದ್ದಾರೆ ಎಂದು ಸುಮಲತಾ ಅವರ ಆರೋಪಿಸಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent Articles

spot_img

Related Stories

Share via
Copy link