ವೃದ್ದೆಯ ಚಿನ್ನದ ಸರ ದೋಚಿ ಪರಾರಿ!

 ದಾವಣಗೆರೆ:

      ಮದುವೆಗೆ ಬಂದಿದ್ದ ವೃದ್ಧೆಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಅಪರಿಚಿತನೊಬ್ಬ 40 ಗ್ರಾಂ ತೂಕದ 1.20 ಲಕ್ಷ ರೂ. ಮೌಲ್ಯದ ಚಿನ್ನದ ಸರ ದೋಚಿರುವ ಘಟನೆ ಸೋಮವಾರ ನಗರದ ಬಾಪೂಜಿ ಸಮುದಾಯ ಭವನದಲ್ಲಿ ನಡೆದಿದೆ.

      ಇಲ್ಲಿನ ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಮೊಮ್ಮಗಳ ವಿವಾಹಕ್ಕೆಂದು ಚಿತ್ರದುರ್ಗ ತಾಲೂಕು ಚಿಕ್ಕಪ್ಪನಹಳ್ಳಿ ಗ್ರಾಮದ ಕೊಟ್ರಮ್ಮ(75) ಬಂದಿದ್ದರು. ಮದುವೆ ಕಾರ್ಯಕ್ರಮ ಮುಗಿದ ನಂತರ ಮಧ್ಯಾಹ್ನ ವಿಶ್ರಾಂತಿಗೆಂದು ರೂಮ್‍ನ ಬಳಿ ಇರುವ ಸ್ಟೇರ್‍ಕೇಸ್ ಮೆಟ್ಟಿಲುಗಳ ಮೇಲೆ ಕೊಟ್ರಮ್ಮ ಕುಳಿತಿದ್ದರು.

      ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಮಾತನಾಡಿಸಿ, ಅಜ್ಜಿಯನ್ನು ರೂಮಿಗೆ ಬಿಡುವುದಾಗಿ ನಂಬಿಸಿದ್ದಾನೆ. ರೂಮ್ ಬಳಿಗೆ ಕರೆದುಕೊಂಡು ಹೋಗಿ ಏಕಾಏಕಿ ಅಜ್ಜಿಯನ್ನು ಒಳಗೆ ತಳ್ಳಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ.
ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link