ದಾವಣಗೆರೆ:
ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡರ್ ಗಿರೀಶ್ ನೇತೃತ್ವದಲ್ಲಿ ಚುನಾವಣಾ ಪ್ರಾಚರ ನಡೆಯಿತು.ಗ್ರಾಮದ ಮನೆ-ಮನೆಗೆ ತೆರಳಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಂದಿರುವ ಜನಪರ ಯೋಜನೆಗಳು ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಮೈತ್ರಿ ಅಭ್ಯರ್ಥಿ ಮಂಜಪ್ಪನವರ ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾಗಾನಹಳ್ಳಿ ಪರಶುರಾಮ್, ಕೆ.ಜಿ.ಶಾಂತರಾಜ್, ಬೂದಾಳ್ ಬಾಬು, ಪ್ರಸನ್ನ ಹೆಚ್.ಎಸ್, ಉಮಾಪತಿ ಕೋಡೆ, ಕಲ್ಯಾಣಪ್ಪರ ಕಲ್ಲಪ್ಪ, ಚಮನ್‍ಸಾಬ್ ಅಂಗಡಿ, ಹದಡಿ ಹನುಮಂತಪ್ಪ, ರಾಮೇಗೌಡರ ದರ್ಶನ್, ರಾಮೇಗೌಡರ ದ್ಯಾಮಪ್ಪ, ಆಂಜಿನಪ್ಪ, ಹರಣಿ ಜಯಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
