ಮೋದಿ ಕಾರ್ಯಕ್ರಮದಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ : ಅಲೋಕ್ ಕುಮಾರ್

ಬೆಂಗಳೂರು: 

    ನಿನ್ನೆ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭದ್ರತಾ ಲೋಪವಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ  ಎಡಿಜಿಪಿ ಅಲೋಕ್ ಕುಮಾರ್, ಮೋದಿ ರೋಡ್ ಶೋ ವೇಳೆ ಯಾವುದೇ  ಭದ್ರತಾ ಲೋಪ ಆಗಿಲ್ಲ ಎಂದಿದ್ದಾರೆ.

ಈ ಕುರಿತ ವಿಡಿಯೋವೊಂದನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಅಲೋಕ್ ಕುಮಾರ್, ಪ್ರಧಾನಿ ವಾಹನದ ಕಡೆಗೆ ನುಗ್ಗಿದ ವ್ಯಕ್ತಿಯನ್ನು ನಾನು ಮತ್ತು ಎಸ್ ಪಿಜಿ ಪಡೆ ಖುದ್ದು ವಶಕ್ಕೆ ಪಡೆದಿದ್ದೇವೆ. ಮೋದಿ ಅವರ ವಾಹನದಿಂದ ಬಹಳ ದೂರದಲ್ಲೇ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap