ಹರಪನಹಳ್ಳಿ :
ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ, ಕರ್ನಾಟಕ ರತ್ನ ಎನಿಸಿಕೊಂಡಿರುವ ಸಿದ್ದಗಂಗಾಮಠದ ಶ್ರೀ ಶಿವಕುಮಾರಸ್ವಾಮಿಗಳಿಗೆ ಕೇಂದ್ರ ಸರಕಾರ ಮರಣೋತ್ತರವಾಗಿ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕು ಎಂದು ತಾಲೂಕು ಕಾಂಗ್ರೆಸ್ ಒತ್ತಾಯಿಸಿದರು.
ಪಟ್ಟಣದ ಕಾಸಿಮಠದ ಬಳಿ ಇರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬುಧುವಾರ ಸಿದ್ದಗಂಗಾ ಶಿವಕುಮಾರಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ನೇರವೇರಿಸಿ, ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಪಕ್ಷದ ಮುಖಂಡರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ ಸಾಕ್ಷಾತ ದೇವರ ಸ್ವರೂಪದಲ್ಲಿ ಶಿವಕುಮಾರಸ್ವಾಮಿಗಳನ್ನು ಕಾಣುತ್ತಿದ್ದೇವೆ. ಅವರನ್ನು ಹೃದಯಲ್ಲಿಟ್ಟು ಪೂಜಿಸೋಣ, ಅವರು ನಮ್ಮೊಟ್ಟಿಗೆ ಜೀವಂತವಾಗಿದ್ದಾರೆ ಎಂದ ಅವರು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಒಬ್ಬ ಬಡವಿದ್ಯಾರ್ಥಿಯನ್ನು ದತ್ತುತೆಗೆದುಕೊಂಡು ಅವರಿಗೆ ಊಟ, ಬಟ್ಟೆ, ಶಿಕ್ಷಣ ನೀಡುವ ಮೂಲಕ ಅವರ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳೋಣ ಎಂದರು.
ಸರ್ವಜನಾಂಗಕ್ಕೂ ಹಸಿದವರ ಹೊಟ್ಟೆ ತುಂಬಿಸಿದ ಮಹಾನ್ ಪುರುಷ್‍ರಾಗಿದ್ದು ಮಠಗಳಲ್ಲಿನ ದಾಸೋಹ ಪದ್ದತಿಗೆ ಶ್ರೇಷ್ಠ ಅರ್ಥವನ್ನು ಕಲ್ಪಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಟಿ.ಎಚ್.ಎಂ.ವೀರುಪಾಕ್ಷಯ್ಯ, ಹೆಚ್.ಬಿ.ಪರಶುರಾಮಪ್ಪ, ಎಂ.ವಿ.ಆಂಜಿನಪ್ಪ, ಅಬ್ದುಲ್ ರೆಹಮಾನ್ ಸಾಬ್, ಅಲದಹಳ್ಳಿ ಷಣ್ಮುಖಪ್ಪ, ವೆಂಕಟೇಶ, ಬೆಲೂರು ಅಂಜಪ್ಪ, ಮಲ್ಲಿಕಾರ್ಜುನ ಸ್ವಾಮಿ, ಪುಷ್ಪ ದೀವಾಕರ ರವರು ಮಾತನಾಡಿ ಉತ್ತರದಲ್ಲಿ ಗಂಗೆಯಂತೆ ದಕ್ಷಿಣದಲ್ಲಿ ಸಿದ್ದಗಂಗೆ ಪ್ರಸಿದ್ದವಾಗಿದೆ. ದೇಶ ಕಂಡರಿಯದ ವ್ಯಕ್ತಿ, ಬಸವಣ್ಣನವರ ಹಾದಿಯಲ್ಲಿ ಶಿವಕುಮಾರಸ್ವಾಮಿಗಳು ನಡೆದಿದ್ದಾರೆ. ಸಮಾಜ ಸೇವೆ, ಶಿಕ್ಷಣ, ದಾಸೋಹಕ್ಕೆ ತಮ್ಮದೆಯಾದ ಕೊಡುಗೆಯನ್ನು ನೀಡುವ ಮೂಲಕ ಜಗತ್ತಿಗೆ ಕೀರ್ತಿಯನ್ನು ತಂದಿದ್ದಾರೆ. ಮತ್ತೊಮ್ಮೆ ಹುಟ್ಟಿಬರಲಿ ಎಂದು ಶ್ರೀಗಳನ್ನು ಸ್ಮರಣೆ ಮಾಡಿದರು.
ಈ ಸಂದರ್ಭದಲ್ಲಿ ಕೆ.ಎಂ.ಬಸವರಾಜಯ್ಯ, ಪುರಸಭೆ ಸದಸ್ಯರಾದ ಅರುಣಕುಮಾರ, ಕವಿತಾ ವಾಗೀಶ್, ಕವಿತಾ ಸುರೇಶ್, ಸುಮಂಗಲಮ್ಮ, ಲಾಟಿ ದಾದಪೀರ, ಇರ್ಪಾನ್ ಎಂ. ಜಾಕೀರ್, ಮಂಜ್ಯನಾಯ್ಕ, ಸಿ.ಬಸಪ್ಪ, ಇರ್ಷಾದ್, ಜಾವೀದ್, ಶಂಕರ, ನಿಶಾನ, ಮಂಜುನಾಥ,ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
