ಐದಾರು ವರ್ಷ ಕಷ್ಟಪಟ್ಟು ಓದಿದರೆ ಮುಂದೆ ಜೀವನ ಪೂರ್ತಿ ಉತ್ತಮ ಜೀವನ ನಡೆಸಬಹುದು:DC. ಕವಿತಾ ಎಸ್ ಮನ್ನಿಕೇರಿ.

ಹೊಸಪೇಟೆ

   ಸೆ,15.ರಂದು ಇಂಜಿನಿಯರ್ಸ್ ದಿನದ ಆಚರಣೆಯನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಆಚರಿಸಲಾಯಿತು, ದೀಪ ಹಚ್ಚುವುದರ ಮೂಲಕ ವೇದಿಕೆಯ ಕಾರ್ಯಕ್ರಮ ಉದ್ಘಾಟನೆಯನ್ನು ಗಣ್ಯರು ನೆರವೇರಿಸಿದರು.

  ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾದ ಕವಿತಾ ಎಸ್ ಮನ್ನಿಕೇರಿ ರವರು ಮಾತನಾಡಿ ಐದಾರು ವರ್ಷ ಕಷ್ಟಪಟ್ಟು ಓದಿದರೆ ಮುಂದೆ ಜೀವನ ಪೂರ್ತಿ ಉತ್ತಮ ಜೀವನ ನಡೆಸಬಹುದು ಇಲ್ಲವಾದಲ್ಲಿ ಈಗ ಮೋಜು- ಮಸ್ತಿ ಎಂದು ತಿರುಗಾಡಿದರೆ ಮುಂದೆ ಬಹಳ ಕಷ್ಟದ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ ಎಂದು ಮೌಲ್ಯಯುತವಾದ ಮಾತುಗಳನ್ನಾಡಿದರು.

  ಸಂಸ್ಥೆಯ,ಕಾರ್ಯದರ್ಶಿಗಳಾದ ಡಾ. ಟಿ. ಎಂ. ಚಂದ್ರಶೇಖರಯ್ಯನವರು ಅಂಕ ಗಳಿಸುವುದೊಂದೇ ಶಿಕ್ಷಣದ ಉದ್ದೇಶವಲ್ಲ ಭಾಷೆಯ ಹಿನ್ನೆಲೆಯಲ್ಲಿ ಮಾತನಾಡುವ ಕೌಶಲ್ಯವನ್ನು ಸಹ ಸರಿಯಾಗಿ ಕಲಿಯಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸಂಸ್ಥೆಯ ಉಪ ಕಾರ್ಯದರ್ಶಿಗಳಾದ ಟಿ. ಎಂ. ವಿಜಯಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಉಪ ಪ್ರಾಚಾರ್ಯರಾದ ಟಿ. ನಜಿರುದ್ದೀನ ಅವರು ಉದ್ಘಾಟನಾ ನುಡಿಗಳಲ್ಲಿ ವಿಶ್ವೇಶ್ವರಯ್ಯ ನವರು ಅವರ ಆಲೋಚನಾ ಶಕ್ತಿಯಿಂದ ಅಸಾಧ್ಯ ವನ್ನು ಸಾಧಿಸಲು ನಮಗೆ ಇವರ ಸಾಧನೆಗಳೇ ಸಾಕ್ಷಿ ಎಂದು ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡಿದರು.

   ಮುಖ್ಯ ಅತಿಥಿಗಳಾದ ಜಯಶ್ರೀ ಎಸ್. ಸೀನಿಯರ್ ಆಫೀಸರ್ KFIL ಬೇವಿನ ಹಳ್ಳಿ.ಇವರು ವಿಶ್ವೇಶ್ವರಯ್ಯ ನವರ ಜೀವನದ ಒಂದು ಸಣ್ಣ ಕತೆಯನ್ನು ಉದಾಹರಿಸುತ್ತ ,ಪ್ರತಿಯೊಬ್ಬರ ಸಾಧನೆಗೂ ಒಂದು ಕತೆಯೇ ಪ್ರೇರಣೆಯಿಂದ ಕೂಡಿರುತ್ತದೆ,ಹಾಗೇ ನೀವು ನಿಮ್ಮ ಪಯಣದಲ್ಲಿ ಉತ್ತಮ ಸಾಧಕರಾಗಲು ಇಂತಹ ಸಾಧಕರ ಜೀವನವೇ ಮಾದರಿಯಾಗಿ ಅರ್ಥೈಸಿಕೊಂಡಾಗ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಹೆಚ್. ಕೆ. ಶಂಕರಾನಂದ ಅವರು, ವಿಶ್ವೇಶ್ವರಯ್ಯ ನವರ ಜೀವನದ ಮಂತ್ರ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅರಿತು ಅಳವಡಿಸಿಕೊಂಡಾಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ ಎಂದು,ಹೇಳುತ್ತ ,ಬಹಳ ಹೆಮ್ಮೆಯಿಂದ ನಮ್ಮ ಕಾಲೇಜಿನಲ್ಲಿ ಜ್ಞಾನಾರ್ಜನೆ ಪಡೆದ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಹ ಗುರುತಿಸಿ ಕೊಂಡಿದ್ದಾರೆ, ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು .ಸೆಮಿಸ್ಟರ್ ಮತ್ತು ಅಂತಿಮ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವನ್ನು ಮಂಜುನಾಥ್ ಅವರು ನೆರವೇರಿಸಿದರು. ಗಣ್ಯರು ಅಭಿನಂದಿಸಿದರು ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ -ಬೋಧಕೇತರ ಸಿಬ್ಬಂದಿ ವರ್ಗದವರು, ಐ. ಟಿ. ಐ ಕಾಲೇಜಿನ ಸಿಬ್ಬಂದಿ ಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link