ಬೆಂಗಳೂರು
ಆಂಬ್ಯುಲೆನ್ಸ್ ಚಾಲಕರು, ‘108 ಆರೋಗ್ಯ ಕವಚ ಆಂಬ್ಯುಲೆನ್ಸ್’ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರು ಮತ್ತು ತುರ್ತು ವೈದ್ಯಕೀಯ ತಂತ್ರಜ್ಞರಿಗೆ ಡಿಸೆಂಬರ್‌ನಿಂದ ಪೂರ್ಣ ವೇತನ ದೊರೆತಿಲ್ಲ. ಮೂರು ಯೂನಿಯನ್‌ಗಳ ಸುಮಾರು 3,500 ಉದ್ಯೋಗಿಗಳ ಪರವಾಗಿ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ. ಇವರೆಲ್ಲ ಇಎಂಆರ್ಐ ಗ್ರೀನ್ ಹೆಲ್ತ್ ಸರ್ವಿಸಸ್ (ಹಿಂದೆ ಜಿವಿಕೆ ಇಎಂಆರ್ಐ) ಜತೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೂರು ಯೂನಿಯನ್‌ಗಳ ಸದಸ್ಯರು ಮೇ 6 ರಿಂದ ಮುಷ್ಕರ ನಡೆಸಲು ಯೋಜಿಸಿದ್ದರು. ಆದರೆ ರಾಜ್ಯ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿದ ನಂತರ ಮುಷ್ಕರ ಮುಂದೂಡಿದ್ದರು. ಆಗಿ ಮೂರು ತಿಂಗಳ ನಂತರವೂ ವೇತನ ಪಾವತಿ ಸಮಸ್ಯೆ ಹಾಗೆಯೇ ಉಳಿದಿದೆ.
ಆಂಬ್ಯುಲೆನ್ಸ್ ಚಾಲಕರು ಮತ್ತು ತುರ್ತು ವೈದ್ಯಕೀಯ ತಂತ್ರಜ್ಞರು ತಮ್ಮ ಡಿಸೆಂಬರ್ ಮತ್ತು ಜನವರಿ ತಿಂಗಳ ಸಂಬಳದ ಶೇ 50 ರಷ್ಟನ್ನು ಮೇ ತಿಂಗಳಲ್ಲಿ ಸ್ವೀಕರಿಸಿದ್ದಾರೆ. ಫೆಬ್ರವರಿಯಿಂದ ವೇತನ ದೊರೆತಿಲ್ಲ ಎಂದು ಅವರು ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಕೆಲವೇ ಕೆಲವು ಸಿಬ್ಬಂದಿಗೆ 5,000 ಮತ್ತು 10,000 ರೂ.ನಂತೆ ಪಾವತಿಯಾಗಿದೆ ಎಂದೂ ಹೇಳಲಾಗಿದೆ.