ಬೆಳಗಾವಿ: ಡಿ.10ರಂದು ಪಂಚಮಸಾಲಿಗಳ ಮೌನ ಪ್ರತಿಭಟನೆ

ಬೆಳಗಾವಿ:

    ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ವೇಳೆ 2ಎ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿಗಳ ಮೇಲೆ ಪೊಲೀಸರ ಲಾಠಿಚಾರ್ಜ್ ಖಂಡಿಸಿ, ಡಿಸೆಂಬರ್ 10 ರಂದು ಬೆಳಗಾವಿಯಲ್ಲಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಗುರುವಾರ ಹೇಳಿದ್ದಾರೆ.

    ಚಿಕ್ಕೋಡಿಯ ವಕೀಲ ಮಹಾದೇವ ಇತಿ ಅವರ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಂಚಮಸಾಲಿಗಳ ಮೇಲಿನ ‘ಕ್ರೂರ ಹಲ್ಲೆ’ಯನ್ನು ಸಮುದಾಯ ಮರೆತಿಲ್ಲ ಎಂದು ಹೇಳಿದರು.

   ಡಿ.10ರಂದು ಲಿಂಗಾಯತರ ಮೇಲಿನ ದೌರ್ಜನ್ಯ ದಿನವನ್ನಾಗಿ ಆಚರಿಸಲಾಗುವುದು. ಪ್ರತಿಭಟನೆಯ ಸಂಕೇತವಾಗಿ ನಾವು ಗಾಂಧಿ ಭವನದಿಂದ ಕಪ್ಪು ಪಟ್ಟಿಗಳನ್ನು ಧರಿಸಿ ಮೌನ ಪ್ರತಿಭಟನೆ ನಡೆಸುತ್ತೇವೆ. ಹಿಂದಿನ ಯಾವುದೇ ಸರ್ಕಾರಗಳು ಲಿಂಗಾಯತ ಸಮುದಾಯವನ್ನು ಈ ರೀತಿಯ ದೌರ್ಜನ್ಯಕ್ಕೆ ಒಳಪಡಿಸಿಲ್ಲ, ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಸಮುದಾಯದ ಮೇಲೆ ದೌರ್ಜನ್ಯ ಎಸಗಿದೆ.

   ಡಿಸೆಂಬರ್ 10 ರ ಪ್ರತಿಭಟನೆಯಲ್ಲಿ ಭಾಗವಹಿಸಲು ಸಮಾಜದ ಎಲ್ಲ ಸದಸ್ಯರಿಗೂ ನಾವು ಮನವಿ ಮಾಡುತ್ತೇವೆ. 2A ಮೀಸಲಾತಿಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ತಿಳಿಸಿದರು.

Recent Articles

spot_img

Related Stories

Share via
Copy link