ಇಡಿ ವಶವಾದ ನೀರವ್ ಮೋದಿಯ ಹಾಂಕಾಂಗ್ ನ 255 ಕೋಟಿ ಆಸ್ತಿ..!

ದೆಹಲಿ:

      ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಕೋಟ್ಯಂತರ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿಗೆ ಸೇರಿದ ಹಾಂಕಾಂಗ್ ನಲ್ಲಿರುವ 255 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ.

      255 ಕೋಟಿ ರೂ. ಮೌಲ್ಯದ ಆಸ್ತಿಗಳು ಮತ್ತು ವಜ್ರ-ಚಿನ್ನಾಭರಣಗಳ ಜೊತೆಗೆ ವಂಚಕ ಉದ್ಯಮಿಗೆ ಸೇರಿದ 4,744 ಕೋಟಿ ರೂ.ಗಳ ಆಸ್ತಿ-ಪಾಸ್ತಿಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಂತಾಗಿದೆ. 

      ಭಾರತ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ನಿಂದ ಪಡೆದಿದ್ದ 13,400 ಕೋಟಿ ರೂ. ಸಾಲ ಬಾಕಿ ಹೊಂದಿರುವ ನೀರವ್ ಮೋದಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಹೀಗಾಗಿ ಈತನ ವಿರುದ್ಧ ಭಾರತೀಯ ತನಿಖಾ ಸಂಸ್ಥೆ ತನಿಖೆ ಪ್ರಾರಂಭಿಸಿತ್ತು. ಇದೀಗ ಹಾಂಕಾಂಗ್‍ನಲ್ಲಿ  255 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಲಗತ್ತಿಸಿದೆ. ನೀರವ್ ಮೋದಿಯನ್ನು ಬಂಧಿಸಿ ಭಾರತಕ್ಕೆ ಕರೆತರಲು ಸಿಬಿಐ ಮುಂದಾಗಿದ್ದು, ಇಂಟೆರ್ ಪೋಲ್ (ಅಂತಾರಾಷ್ಟ್ರೀಯ ಪೊಲೀಸ್) ನೆರವು ಕೋರಿದೆ. ಅಲ್ಲದೆ, ಆತನ ಬಂಧನಕ್ಕಾಗಿ ಕಾನೂನು ಕುಣಿಕೆಯನ್ನೂ ಸಹ ಬಿಗಿಗೊಳಿಸುತ್ತಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap