ರಘು ರಾಮ್‌ ರಾಜನ್‌ ವಿರುದ್ಧ ಉಪರಾಷ್ಟ್ರಪತಿ ವಾಗ್ದಾಳಿ

ನವದೆಹಲಿ:

     ರಿಸರ್ವ್‌ ಬ್ಯಾಂಕ್‌  ನ ಗವರನರ್‌ ಅಂತಹ ಪ್ರಮುಖ ಹುದ್ದೆಯಲ್ಲಿ ಅಲ್ಪಾವಧಿಗೆ ಕೆಲಸ ಮಾಡಿರುವ  ಕೆಲವು  ವಿದೇಶಿ ತಜ್ಞರು, ತಮ್ಮ ದೇಶಕ್ಕೆ ಮರಳಿದ ನಂತರ ನೀಡುವ ಹೇಳಿಕೆಯನ್ನು ದೇಶದ ಜನರು ಗಂಭೀರವಾಗಿ ಪರಿಗಣಿಸಬಾರದು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.  

     ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ 61 ನೇ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದ ಧನಕರ್, ಸತತ ಪ್ರಯತ್ನಗಳ ನಂತರ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ .ಆದರೂ, ಕೆಲವು ಜನರು ಭಾರತದ ಆರ್ಥಿಕತೆ ಬಗ್ಗೆ ತಪ್ಪು ಕಲ್ಪನೆ ಹರಡುತ್ತಿದ್ದಾರೆ ಎಂದು ಅವರು ಹೇಳುವ ಮೂಲಕ ರಘುರಾಮ್ ರಾಜನ್ ವಿರುದ್ಧ ವಾಗ್ದಾಳಿ ನಡೆಸಿದರು.

     ಈ ರಾಷ್ಟ್ರಕ್ಕಾಗಿ ಬೆವರು ಹರಿಸುವವರ ಸಾಧನೆಗಳನ್ನು ಕುಗ್ಗಿಸಲು, ಕಳಂಕ ತರಲು ಪ್ರಯತ್ನಿಸುವ ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು. ಕೆಲವರು ಆರ್ ಬಿಐ ನಂತಹ ಪ್ರಮುಖ ಸಂಸ್ಥೆಯಲ್ಲಿ ಕೆಲಸ ಮಾಡಿರುತ್ತಾರೆ. ಹೊರ ದೇಶದಿಂದ ಬಂದು, ಪ್ರಮುಖ ಸ್ಥಾನ ಅಲಂಕರಿಸಿದ್ದವರು ತಮ್ಮ ಸ್ವದೇಶಕ್ಕೆ ಮರಳಿದಾಗ ಭಾರತ ಆಹಾರ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಟೀಕಿಸುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap