ಭಟ್ಕಳ:
ಭಟ್ಕಳ ತಾಲೂಕಿನ ಹೆಬಳೆಯಲ್ಲಿರುವ ಶ್ರೀ ಅರಿಕಲ್ಲ ಜಟಕೇಶ್ವರ ಹಾಗೂ ಶ್ರೀ ಶೇಡಬರೆ ಜಟಿಕ ಮಹಾಸತಿ ದೇಗುಲದಲ್ಲಿ ಇತ್ತೀಚಿಗೆ ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿರಾಲಿಯ ಅಮೀರ ಹಸನ್ ಬ್ಯಾರಿ ಹಾಗೂ ಮಹಮ್ಮದ್ ಇಮ್ರಾನ್ ಅಬ್ದುಲ್ ಗಫಾರ್ ಸಾ:ಭಟ್ಕಳ ಇವರು ಆರೋಪಿಗಳಾಗಿದ್ದು ಇವರುಗಳನ್ನು ಬಂಧಿಸಿ, ಆರೋಪಿತರಿಂದ ಕೃತ್ಯಕ್ಕೆ ಬಳಸಲಾದ ಎರಡು ಮೋಟಾರ್ ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.








