ನವದೆಹಲಿ:
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಅವರ ಮಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೋದಿ, ದೇವೇಗೌಡರು ಭೇಟಿಯಾದದ್ದು ಗೌರವದ ಸಂಗತಿ. ವಿವಿಧ ವಿಷಯಗಳ ಬಗ್ಗೆ ಅವರ ಜಾಣ್ಮೆ ಮತ್ತು ದೃಷ್ಟಿಕೋನ ಆಳವಾಗಿದ್ದು, ಮೌಲ್ಯಯುತವಾದುದ್ದಾಗಿದೆ. ನನಗೆ ಕಲಾಕೃತಿಯೊಂದನ್ನು ಉಡುಗೊರೆಯಾಗಿ ನೀಡುವ ಮೂಲಕ ನನ್ನ ಇತ್ತೀಚಿನ ಕನ್ಯಾಕುಮಾರಿ ಭೇಟಿ ನೆನಪಿಸಿದ ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ
