ತುರ್ತು ಪರಿಸ್ಥಿತಿ ಕುರಿತ ಪುಸ್ತಕ: ದೇವೇಗೌಡರ ಮುನ್ನುಡಿ…..!

ನವದೆಹಲಿ

    ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷಗಳು ಪೂರ್ಣಗೊಂಡಿರುವ ಸಮಯದಲ್ಲಿ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್  ಹೊರತಂದಿರುವ ‘ದಿ ಎಮರ್ಜೆನ್ಸಿ ಡೈರೀಸ್-ಇಯರ್ಸ್​ ದಟ್​ ಫೋರ್ಜ್ಡ್​ ಎ ಲೀಡರ್’  ಪುಸ್ತಕವನ್ನು ಗೃಹ ಸಚಿವ ಅಮಿತ್ ಶಾ ಇಂದು ಲೋಕಾರ್ಪಣೆ ಮಾಡಲಿದ್ದಾರೆ.

    ಈ ಪುಸ್ತಕವು ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಆಗ ಯುವ ಆರ್‌ಎಸ್‌ಎಸ್ ಪ್ರಚಾರಕರಾಗಿದ್ದ ಪ್ರಧಾನಿ ಮೋದಿ ವಹಿಸಿದ ಪಾತ್ರವನ್ನು ಒಳಗೊಂಡಿದೆ. ಪುಸ್ತಕದ ವಿಶೇಷ ಮುನ್ನುಡಿಯನ್ನು ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಬರೆದಿದ್ದಾರೆ.ಪುಸ್ತಕದ ಪ್ರಕಾರ, ಪ್ರಧಾನಿ ಮೋದಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಿಖ್, ಸ್ವಾಮೀಜಿ ಹೀಗೆ ಹತ್ತಾರು ವೇಷಗಳನ್ನು ತೊಟ್ಟಿದ್ದ ಪ್ರಧಾನಿ ಮೋದಿ ಕುರಿತು ಉಲ್ಲೇಖಿಸಲಾಗಿದೆ.

    1970 ರ ದಶಕದ ಮಧ್ಯಭಾಗದಲ್ಲಿ ಭಾರತವು ತುರ್ತು ಪರಿಸ್ಥಿತಿಯ ಸಂಕೋಲೆಯಲ್ಲಿ ಸಿಲುಕಿದ್ದಾಗ, ಸಂಘದ ಯುವ ಪ್ರಚಾರಕರಾಗಿದ್ದ ಮೋದಿ, ಇತರ ಹಲವಾರು ಪ್ರಮುಖ ನಾಯಕರು ಮತ್ತು ಕಾರ್ಯಕರ್ತರೊಂದಿಗೆ, ಇಂದಿರಾ ಗಾಂಧಿಯವರ ನಿರಂಕುಶ ಆಡಳಿತದ ವಿರುದ್ಧ ಪ್ರತಿಭಟಿಸಿದ್ದರು ಎಂಬುದನ್ನು ಪುಸ್ತಕದಲ್ಲಿ ಹೇಳಲಾಗಿದೆ.    ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಪ್ರಧಾನಿ ಮೋದಿ, ತುರ್ತು ಪರಿಸ್ಥಿತಿ ಹೇರಿದಾಗ, ನಾನು ಆರ್‌ಎಸ್‌ಎಸ್‌ನ ಯುವ ಪ್ರಚಾರಕನಾಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ತುರ್ತು ಪರಿಸ್ಥಿತಿ ವಿರೋಧಿ ಚಳವಳಿ ನನಗೆ ಕಲಿಕೆಯ ಅನುಭವವಾಗಿತ್ತು. ಇದು ನಮ್ಮ ಪ್ರಜಾಪ್ರಭುತ್ವ ರಚನೆಯನ್ನು ರಕ್ಷಿಸುವ ಮಹತ್ವವನ್ನು ಪುನರುಚ್ಚರಿಸಿತು.

Recent Articles

spot_img

Related Stories

Share via
Copy link