ಡೆವಿಲ್ ಚಿತ್ರೀಕರಣ ಆರಂಭಕ್ಕೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ದಾಸ

ಮೈಸೂರು: 

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಂದ ಹೊರಬಂದ ನಟ ದರ್ಶನ್ ಎಂಟು ತಿಂಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದ ಕಾರಣ ಅರ್ಧಕ್ಕೆ ನಿಂತು ಹೋಗಿದ್ದ ‘ಡೆವಿಲ್’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಇಂದಿನಿಂದ ಶುರುವಾಗಿದೆ. ಈ ಹಿನ್ನೆಲೆ ಚಿತ್ರೀಕರಣ ಆರಂಭಕ್ಕೂ ಮುನ್ನ ದರ್ಶನ್ ದೇವರ ಮೊರೆ ಹೋಗಿದ್ದಾರೆ.

    8 ತಿಂಗಳ ಬಳಿಕ ‘ಡೆವಿಲ್’ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವ ದರ್ಶನ್ ಶೂಟಿಂಗ್‌ಗೂ ಮುನ್ನ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಚಾಮುಂಡಿ ಬೆಟ್ಟದಿಂದ ನೇರವಾಗಿ ಸರ್ಕಾರಿ ಅತಿಥಿ ಗೃಹಕ್ಕೆ ದರ್ಶನ್ ಆಗಮಿಸಿದ್ದಾರೆ.

   ಮಾರ್ಚ್ 12ರಿಂದ 15ರವರೆಗೆ ಶೂಟಿಂಗ್‌ಗೆ ಅನುಮತಿ ಸಿಕ್ಕಿದೆ. ಇಂದಿನಿಂದ ಮಾ.14ರ ವರೆಗೆ ಸರ್ಕಾರಿ ಅತಿಥಿ ಗೃಹದಲ್ಲಿ ‘ಡೆವಿಲ್’ ಶೂಟಿಂಗ್ ನಡೆಯಲಿದ್ದು, ಮಾ.15ರಂದು ಲಲಿತಮಹಲ್ ಪ್ಯಾಲೇಸ್‌ನಲ್ಲಿ ಶೂಟಿಂಗ್ ನಡೆಯಲಿದೆ. ಖಾಸಗಿ ಭದ್ರತಾ ಪಡೆ ಹಾಗೂ ಪೊಲೀಸ್ ಪಡೆ ಎರಡನ್ನೂ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

Recent Articles

spot_img

Related Stories

Share via
Copy link