ಸ್ಯಾಂಡಲ್‌ವುಡ್ ನಿರ್ದೇಶಕ ಪವನ್ ಒಡೆಯರ್ ನಿರ್ಮಾಣದ ಡೊಳ್ಳು ಸಿನಿಮಾ ಪ್ರತಿಷ್ಠಿತ ಹ್ಯಾಬಿಟಾಟ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೇ 10ರಂದು ಮಧ್ಯಾಹ್ನ 2 ಗಂಟೆಗೆ ಡೊಳ್ಳು ಸಿನಿಮಾ ಪ್ರದರ್ಶನವಾಗಲಿದೆ.
ಡೊಳ್ಳು ಕುಣಿತದ ಸುತ್ತ ಸಾಗುವ ಈ ಸಿನಿಮಾ ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ರಾಜಸ್ಥಾನದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಡೊಳ್ಳು ಚಿತ್ರಕ್ಕೆ ಸ್ಪೆಷಲ್ ಜೂರಿ ಅವಾರ್ಡ್ ಬೆಸ್ಟ್ ರಿಜಿನಲ್ ಫ್ಯೂಚರ್ ಫಿಲ್ಮ್ ಮತ್ತು ಬೆಸ್ಟ್ ಡೆಬ್ಯುಟಿ ಡೈರೆಕ್ಷನ್ ಆಫ್ ರಿಜಿನಲ್ ಫೀಚರ್ ಫಿಲ್ಮ್ ಎರಡು ಪ್ರಶಸ್ತಿಗಳ ಗೌರವ ದೊರೆತಿದೆ.
‘ದಂಗಲ್’ ದಾಖಲೆಮಾಡಿದ ಯಶ್; ಅತಿ ಹೆಚ್ಚು ಹಣ ಗಳಿಸಿದ 2ನೇ ಸಿನಿಮಾ ‘ಕೆಜಿಎಫ್ 2’
ಅಮೆರಿಕಾದ ಬಾಸ್ಟನ್ ನಗರಿಯಲ್ಲಿ ನಡೆದ ಕಲೈಡೋಸ್ಕೋಪ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಸಿನಿಮಾ ಪ್ರಶಸ್ತಿ ಮತ್ತು ಅತ್ಯುತ್ತಮ ತಾಂತ್ರಿಕ ಸಿನಿಮಾ ಪ್ರಶಸ್ತಿ, ನೇಪಾಳ ಅಂತಾರಾಷ್ಟ್ರೀಯ ಸಿನಿಮೋತ್ಸವ, ಇನೋವೇಟಿವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ದಾದಾ ಸಾಹೇಬ್ ಫಾಲ್ಕೆ ಹೆಸರಿನ ಅವಾರ್ಡ್ ಅನ್ನು ಡೊಳ್ಳು ಸಿನಿಮಾ ತನ್ನದಾಗಿಸಿಕೊಂಡಿದೆ.
ಚೆನ್ನೈನಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವ, ಕೇಂದ್ರ ಸರ್ಕಾರದಿಂದ ಬರ್ಲಿನ್ ಫೆಸ್ಟಿವೆಲ್ ಆಯ್ಕೆಯಾದ 9 ಭಾರತೀಯ ಸಿನಿಮಾಗಳಲ್ಲಿ ಡೊಳ್ಳು ಕೂಡ ಒಂದು. ಇದರ ಜೊತೆಗೆ ಪ್ರತಿಷ್ಠಿತ ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಡೊಳ್ಳು ಸಿನಿಮಾ ಪ್ರದರ್ಶನಗೊಂಡಿದ್ದು, ಈಗ ಹ್ಯಾಬಿಟಾಟ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.
‘ಅವತಾರ ಪುರುಷ’ ಬೇರೆ ಭಾಷೆಗೆ ಯಾಕೆ ಡಬ್ ಆಗಿಲ್ಲ? ಪ್ಯಾನ್ ಇಂಡಿಯಾ ಪ್ಲಾನ್ ಬಗ್ಗೆ ಸುನಿ ಹೇಳೋದಿಷ್ಟು
ರಾಷ್ಟ್ರಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ಚೊಚ್ಚಲ ಸಿನಿಮಾ ಡೊಳ್ಳುದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಜೋಡಿಯಾಗಿ ನಟಿಸಿದ್ದು, ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ ಸುರೇಶ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅನಂತ್ ಕಾಮತ್ ಸಂಗೀತ, ಅಭಿಲಾಷ್ ಕಲಾಥಿ ಚಿತ್ರಕ್ಕೆ ಛಾಯಾಗ್ರಹಣ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ