ಬೆಂಗಳೂರು
ಬರೀ ಎರಡು ತಿಂಗಳಲ್ಲೇ ಕರ್ನಾಟಕ ಪೊಲೀಸರು ಸರಿಸುಮಾರು 7,361 ಮಂದಿಯ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಇನ್ನು ಕಳೆದ ವರ್ಷವಿಡೀ 3,314 ಹೆಸರುಗಳನ್ನು ರೌಡಿ ಶೀಟರ್ ಪಟ್ಟಿಯಿಂದ ಕೈಬಿಡಲಾಗಿತ್ತು. ಈಗ ಕೇವಲ ಎರಡು ತಿಂಗಳಲ್ಲಿ ಎರಡು ಪಟ್ಟು ರೌಡಿಗಳನ್ನು ರೌಡಿ ಶೀಟರ್ ಪಟ್ಟಿಯಿಂದ ಕೈಬಿಟ್ಟಿರುವುದು ಅನುಮಾನ ಹುಟ್ಟಿಸಿದೆ. ಈ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿಗಳೂ ಕಳವಳ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಬೀದರ್‌ನ ಕಾಂಗ್ರೆಸ್ ಎಂಎಲ್‌ಸಿ ಅರವಿಂದಕುಮಾರ್ ಅರಳಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, 2018 ರಿಂದ ಇಲ್ಲಿಯವರೆಗೆ 26,319 ರೌಡಿ ಶೀಟರ್‌ಗಳ ಹೆಸರನ್ನು ಸರ್ಕಾರ ಕೈಬಿಟ್ಟಿದೆ ಎಂದು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. 2021 ರಲ್ಲಿ 8,062 ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.