24ತೀರ್ಥಂಕರರ ಪ್ರತಿಮೆಗಳಿಗೆ ಅಭಿಷೇಕ.
ತುಮಕೂರು
ಮಂದರಗಿರಿಯಲ್ಲಿ ಇಂದಿನಿಂದ ಮಾ. 13ರವರೆಗೆ ಏರ್ಪಡಿಸಿರುವ ದಿವ್ಯಾಕಾಶ ಸಂವಶರಣ ಮಹೋತ್ಸವ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಮುನಿಶ್ರೀ ಅಮೋಘ ಕೀರ್ತಿ, ಅಮರಕೀರ್ತಿ ಮಹಾ ರಾಜ್ ಅವರ ನೇತೃತ್ವದಲ್ಲಿ ಆರಂಭಗೊಂಡಿತು.
ಇಪ್ಪತ್ನಾಲು ತೀರ್ಥಂಕರರಿಗೆ ಶ್ರಾವಕಿಯರಿಂದ ಕ್ಷೀರ, ಮೊಸರು, ಸರ್ವೌಷೋದಿ, ಅರಿಶಿನ, ಗಂಧ ಸೇರಿ ಹಲವು ಅಭಿಷೇಕ ನೆರವೇರಿಸಲಾಯಿತು. ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಶಾಸಕ ಜಿ. ಬಿ. ಜ್ಯೋತಿ ಗಣೇಶ್, ಮಾಜಿ ಎಂಎಲ್ಸಿ ಡಾ. ಎಂ. ಆರ್. ಹುಲಿನಾಯ್ಕರ್, ಸಂವಶರಣ ಮಹೋತ್ಸವ ದ ನಾಗರಾಜ್ ಎಸ್. ಜೆ., ಬಾಹುಬಲಿ, ಜಿನೇಶ್ ಚಂದ್ರಕೀರ್ತಿ, ಸುರೇಶ್ ಕುಮಾರ್ ಪಾರ್ಶ್ವನಾಥ್ ಸೇರಿ ಜಿಲ್ಲೆರಾಜ್ಯ ಹೊರ ರಾಜ್ಯ ದಿಂದ ಸಾವಿರಾರು ಜಿನ ಬಾಂಧವರು ಪಾಲ್ಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
