ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ಸಂಸದ

ನವದೆಹಲಿ:

      ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳ ಕುರಿತು ನಡೆಯುತ್ತಿರುವ ವಿವಾದದ ನಡುವೆ, ಡಿಎಂಕೆ  ಸಂಸದ ಎ ರಾಜಾ ಗುರುವಾರ ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಕಳಂಕ ಹೊಂದಿರುವ ರೋಗಗಳಿಗೆ ಹೋಲಿಸಬೇಕು ಎಂದು ಹೇಳಿದ್ದಾರೆ.

     ಉದಯನಿಧಿಯವರು ಸನಾತನ ಧರ್ಮದ ಬಗ್ಗೆ ಮೃದುವಾಗಿ ಮಾತನಾಡಿದ್ದಾರೆ. ಮಲೇರಿಯಾ, ಡೆಂಘೀ ಅಂತ ರೋಗಗಳು ಸಾಮಾಜಿಕ ಪಿಡುಗು ಅಲ್ಲ. ಅದನ್ನು ಜನರು ಭಯದಿಂದ  ನೋಡುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕುಷ್ಠರೋಗ, ಎಚ್ಐವಿಯನ್ನು ಅಸಹ್ಯಕರವಾಗಿ ನೋಡಲಾಗುತ್ತದೆ. ಆದ್ದರಿಂದ ನಾವು ಇದನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಅವಸ್ಥೆಯಿಂದ ಕೂಡಿದ ಕಾಯಿಲೆಯಾಗಿ ನೋಡಬೇಕಾಗಿದೆ ಎಂದು ಎ. ರಾಜಾ ಹೇಳಿದ್ದಾರೆ

    ಸನಾತನ ಮತ್ತು ವಿಶ್ವಕರ್ಮ ಯೋಜನೆ ಒಂದೇ. ಪ್ರಧಾನಿ ಮೋದಿಯವರು ಸನಾತನ ಧರ್ಮಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ ಹಿಂದೂಗಳು ಸಮುದ್ರವನ್ನು ದಾಟುವುದಿಲ್ಲ ಎಂದು ಅವರು ಅದನ್ನು ಮಾಡುತ್ತಿಲ್ಲ. ಯಾರನ್ನಾದರೂ ಕರೆ ತನ್ನಿ, ನಾನು ಸನಾತನ ಧರ್ಮದ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap