ಕೇಸರಿ 2 ಚಿತ್ರದ ಹಿಂದಿನ ರಿಯಲ್ ಹೀರೋ ಯಾರು ಗೊತ್ತಾ?

ನವದೆಹಲಿ:

    ಅಕ್ಷಯ್ ಕುಮಾರ್, ಆರ್ ಮಾಧವನ್ ಮತ್ತು ಅನನ್ಯ ಪಾಂಡೆ ಜೊತೆಯಾಗಿ ನಟಿಸಿರುವ ಕೇಸರಿ 2  ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಟ್ರೇಲರ್ ಮೂಲಕವೇ ನಟ ಅಕ್ಷಯ್ ಕುಮಾರ್ ಅವರು ಅತ್ಯದ್ಭುತ ಅಭಿನಯದಿಂದ ವೀಕ್ಷಕರ ಮನ ಗೆಲ್ಲುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೂ ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗುವಂತಾಗಿದೆ. ಕೇಸರಿ 2 ಎನ್ನುವುದು ಒಂದು ಸಾಮಾನ್ಯ ಸಿನಿಮಾ ಕಥೆಯಲ್ಲ‌. ಬದಲಾಗಿ ಇತಿಹಾಸದ ನೈಜ ಘಟನೆಯನ್ನು ಆಧರಿಸಿದೆ. ಹಾಗಾದರೆ ಈ ಕಥೆ ಹಿಂದಿನ ಸ್ಫೂರ್ತಿ ಯಾರು? ಅಕ್ಷಯ್ ಕುಮಾರ್ ನಿರ್ವ ಹಿಸಿದ್ದ ಪಾತ್ರ ಯಾವ ವ್ಯಕ್ತಿಯದ್ದು ಎಂಬ ಅನೇಕ ಕುತೂಹಲ ಟ್ರೇಲರ್ ನೋಡಿದ್ದ ಅನೇಕ ವೀಕ್ಷಕರಿಗೆ ಕಾಡುತ್ತಿದೆ. ಈ ಬಗ್ಗೆ ಕೆಲ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ.

    1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದಿತ್ತು. ಆ ಕಾಲ ಘಟ್ಟದಲ್ಲಿ ಬ್ರಿಟಿಷ್ ಸರಕಾರದ ವಿರುದ್ಧ ಭಾರತೀಯರ ಪರ ಧ್ವನಿ ಎತ್ತಿದ್ದ ನಾಯಕರಲ್ಲಿ‌ ಶಂಕರನ್ ನಾಯರ್ ಕೂಡ ಒಬ್ಬರು. ಅವರ ಕಥೆಯೇ ಈ ಕೇಸರಿ- 2 ಸಿನಿಮಾದ ಮೂಲ ಎಳೆಯಾಗಿದೆ. ಇಡೀ ಸಿನಿಮಾವೇ ಇದೇ ಘಟನೆ ಸುತ್ತಾ ಸುತ್ತುತ್ತದೆ. ಹಾಗಾದರೆ ಈ ಶಂಕರನ್‌ ನಾಯರ್‌ ಯಾರು? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರ ಏನಾಗಿತ್ತು? ಇಲ್ಲಿದೆ ಮಾಹಿತಿ.

    ಕೇರಳ ಪಾಲಕಾಡ್ ಜಿಲ್ಲೆಯ ಶ್ರೀಮಂತ ಮನೆತನದ ವ್ಯಕ್ತಿ ಚೆಟ್ಟೂರ್ ಶಂಕರನ್ ನಾಯರ್ ಕಾನೂನಿನ ವೃತ್ತಿ ಜೀವನದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.1880 ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡಿ ಬಳಿಕ ಮಲಬಾರ್ ಪ್ರದೇಶದ ಸಮಸ್ಯೆಗಳನ್ನು ತನಿಖೆ ಮಾಡುವ ಸಮಿತಿಗೆ ಕೂಡ ನೇಮಕಗೊಂಡರು. ಅನಂತರ 1908 ರಲ್ಲಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ಶಾಶ್ವತ ನ್ಯಾಯಾಧೀಶರನ್ನಾಗಿ ನೇಮಕ ಆದರು. ಹೀಗೆ ಸುದೀರ್ಘ ನ್ಯಾಯಾಲಯದ ಕಾನೂನು ಸೇವೆಯಲ್ಲಿ ಇದ್ದ ಅವರು 1915 ರವರೆಗೆ ಅದೇ ಹುದ್ದೆಯಲ್ಲಿದ್ದರು. ಆದರೆ ಬಳಿಕ ಅವರ ಬದುಕಿನ ಚಿತ್ರಣವೇ ಸಂಪೂರ್ಣ ಬದಲಾಯಿತು. 

   ಕಾನೂನು ತಜ್ಞರಾದ ಸರ್ ಚೆಟ್ಟೂರ್ ಶಂಕರನ್ ನಾಯರ್ ಅವರು ವೈಸ್‌ರಾಯ್ ಕಾರ್ಯಕಾರಿ ಮಂಡಳಿಯಲ್ಲಿ ಏಕೈಕ ಭಾರತೀಯ ಸದಸ್ಯರಾಗಿ ನೇಮಕವಾಗಿದ್ದರು. ಇದೇ ಸಂದರ್ಭದಲ್ಲಿ ಜಲಿಯನ್ ವಾಲಾಬಾಗ್ ಹತ್ಯೆಕಂಡ ನಡೆದಿದ್ದು ಬ್ರಿಟಿಷ್ ಸರಕಾರದ ನೀತಿಯ ಬಗ್ಗೆ ಅಸಮಾಧಾನ ಉಂಟಾಗಿ ‌. ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡಿ ತಮ್ಮ ಮೇಲ್ದರ್ಜೆ ಹುದ್ದೆಗೆ ರಾಜೀನಾಮೆ ನೀಡಿದರು. ಇವರ ಈ ನಿರ್ಣಯದಿಂದ ಬ್ರಿಟಿಷ್ ಸರಕಾರ ತೀವ್ರ ಮುಜುಗರ ಕ್ಕೊಳಗಾಗುವಂತೆ ಸಹ ಮಾಡಿತು. ಬ್ರಿಟಿಷ್ ಸರ್ಕಾರದ ಈ ಕೃತ್ಯವನ್ನು ನ್ಯಾಯಾಲಯ ದಲ್ಲಿ ಪ್ರಶ್ನೆ ಮಾಡಿದ ಲಾಯರ್ ಶಂಕರನ್ ನಾಯರ್ ಕುರಿತು ‘ಕೇಸರಿ ಚಾಪ್ಟರ್ 2’ ಸಿನಿಮಾ ಮೂಡಿಬಂದಿದೆ..ಇದೇ ಕೇಸರಿ ಅಧ್ಯಾಯ 2 ಸಿನಿಮಾದಲ್ಲಿ ಹೈಲೈಟ್ ವಿಚಾರವಾಗಿದೆ.

   ಬಾಲಿವುಡ್ ನಟ ಅಕ್ಷಯ್ ಕುಮಾರ್‌ ಬ್ರಿಟಿಷ್ ಸರಕಾರದ ವಿರುದ್ಧ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದ ಧೀಮಂತ ನಾಯಕ ಶಂಕರನ್ ನಾಯರ್ ಪಾತ್ರದಲ್ಲಿ ನಟಿಸಿದ್ದಾರೆ. ಕರಣ್ ಸಿಂಗ್ ತ್ಯಾಗಿ ಕೇಸರಿ- 2 ಸಿನಿಮಾ ನಿರ್ದೇಶಿಸಿದ್ದು ಸ್ಟಾರ್ ನಟ ನಟ-ನಟಿಯರ ತಾರಾಗಣವೇ ಇದೆೆ. ಇದೇ ಎಪ್ರಿಲ್ 18ರಂದು ಸಿನೆಮಾ ರಿಲೀಸ್ ಗೆ ರೆಡಿಯಾಗಿದ್ದು ಕೇಸರಿ ಚಾಪ್ಟರ್ 2’ ಸಿನಿಮಾ ಸಿನಿಪ್ರಿಯರ ಮನ ಗೆಲ್ಲುವ ನಿರೀಕ್ಷೆಯಲ್ಲಿದೆ.