ತುಮಕೂರು :
ಅಕಸ್ಮಾತ್ ಕನಸಿನಲ್ಲಿ ನೀವು ಸ್ನಾನ ಮಾಡುವ ಪ್ರಸಂಗ ಕಂಡುಬಂದರೆ ಜ್ಯೋತಿಷ್ಯದ ಪ್ರಕಾರ ಯಾವ ರೀತಿಯ ಫಲಗಳು ಸಿಗುತ್ತವೆ ಎಂಬುದನ್ನು ತಿಳಿಯೋಣ. ಮೊದಲನೆಯದಾಗಿ ನೀವು ಒಳ್ಳೆಯ ನೀರಿನಿಂದ ಅಂದರೆ ಬಾತ್ರೂಮಿನಲ್ಲಿ ಅಥವಾ ಯಾವುದಾದರೂ ನದಿ ತೀರದಲ್ಲಿ ಸ್ನಾನ ಮಾಡುತ್ತಿರುವ ಹಾಗೆ ಕಾಣಿಸಿದರೆ ಅದನ್ನು ಶುಭ ಎಂದು ಪರಿಗಣಿಸಬಹುದು. ಅದು ನಿಮಗೆ ಒಳಿತಾಗುವುದರ ಮುನ್ಸೂಚನೆ ಎನ್ನಬಹುದು.
ಜಲಪಾತ ಅಥವಾ ಬೇರೆ ಎಲ್ಲಿಯೇ ಆಗಲಿ ಆಗಲಿ ಒಳ್ಳೆಯ ನೀರಿನಲ್ಲಿ ನೀವು ಸ್ನಾನ ಮಾಡುತ್ತಿರುವ ರೀತಿ ಕನಸು ಬಿದ್ದರೆ ಅದು ತುಂಬಾನೇ ಒಳ್ಳೆಯ ಕನಸು ಎಂದು ಭಾವಿಸಬಹುದು. ಮುಂಬರುವ ದಿನಗಳಲ್ಲಿ ನಿಮಗೆ ಸಂತೋಷ, ಧನ ಪ್ರಾಪ್ತಿಯಾಗುತ್ತದೆ ಎಂದು ಈ ಕನಸು ನಿಮಗೆ ಹೇಳುತ್ತಿದೆ. ಅಷ್ಟೇ ಅಲ್ಲದೆ ಬರುವ ದಿನಗಳಲ್ಲಿ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಎಂಬ ಅರ್ಥವನ್ನು ನೀಡುತ್ತದೆ.
ಇನ್ನು ನೀವು ಯಾವುದಾದರೂ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವಾಗ ಒಂದು ವೇಳೆ ಈ ಕನಸು ಬಿದ್ದರೆ ಮುಂಬರುವ ದಿನಗಳಲ್ಲಿ ಗುಣಮುಖರಾಗುತ್ತೀರ ಎಂದು ಹೇಳುತ್ತದೆ ಸ್ವಪ್ನ ಶಾಸ್ತ್ರ. ಒಂದು ವೇಳೆ ನಿಮಗೆ ಆರೋಗ್ಯ ಚೆನ್ನಾಗಿಯೇ ಇದ್ದು, ಇಂತಹ ಕನಸು ಕಂಡರೆ ಮುಂಬರುವ ದಿನಗಳಲ್ಲಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲಿಕ್ಕೆ ಇನ್ನಷ್ಟು ಪ್ರಯತ್ನವನ್ನು ಪಡುತ್ತೀರಾ ಎಂಬ ಮಾಹಿತಿಯನ್ನು ಸಹ ಈ ಕನಸು ತಿಳಿಸುತ್ತದೆ.
ಅದೇ ಒಂದು ವೇಳೆ, ನಿಮ್ಮ ಕನಸಿನಲ್ಲಿ ನೀವು ಕೊಳಕು ನೀರಿನಿಂದ ಸ್ನಾನವನ್ನು ಮಾಡುತ್ತಿರುವ ರೀತಿ ಕನಸು ಬಂದರೆ ಇದು ಅಷ್ಟಾಗಿ ಒಳ್ಳೆಯ ಕನಸಲ್ಲ ಎಂಬ ಲೆಕ್ಕಾಚಾರ ಹಾಕಬಹುದು. ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಮಾನಸಿಕ ತುಮುಲ ಕಾಡುತ್ತದೆ ಎಂದು ಈ ಕನಸು ನಿಮ್ಮನ್ನು ಎಚ್ಚರಿಸುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳನ್ನೂ ತುಂಬಾ ಹುಷಾರಾಗಿ ಮಾಡಬೇಕೆಂದು ಎಂದು ಈ ಕನಸು ತಿಳಿಸುತ್ತದೆ. ಗಂಡಾಂತರ ಇರುವಂತಹ ಕೆಲಸಗಳನ್ನು ನೀವು ತುಂಬಾ ಯೋಚಿಸಿ ಬುದ್ಧಿವಂತಿಕೆಯಿಂದ ಮಾಡಬೇಕು ಎಂದು ಈ ಕನಸು ನಿಮಗೆ ತಿಳಿಸುತ್ತದೆ.
ಒಂದು ವೇಳೆ ನಿಮ್ಮ ಕನಸಿನಲ್ಲಿ ಕಾಲುಗಳನ್ನು ತೊಳೆದುಕೊಳ್ಳುತ್ತಿರುವ ಹಾಗೆ ಕಾಣಿಸಿದರೆ ಇದು ಒಂದು ರೀತಿಯ ಒಳ್ಳೆಯ ಕನಸು ಅಂತನೇ ಹೇಳಬಹುದು. ನೀವು ತುಂಬಾ ತಿಂಗಳುಗಳಿಂದ ಅಥವಾ ವರ್ಷಗಳಿಂದ ಯಾವುದಾದರೂ ಒಂದು ಗುರಿಯನ್ನು ಮುಟ್ಟಬೇಕು ಎಂದು ಕಷ್ಟಪಡುತ್ತಿದ್ದರೆ / ಪ್ರಯತ್ನ ಪಡುತ್ತಿದ್ದರೆ ಮುಂಬರುವ ದಿನಗಳಲ್ಲಿ ಆ ಗುರಿಯನ್ನು ನೀವು ತಪ್ಪದೆ ಮುಟ್ಟುತ್ತೀರಾ ಎಂದು ಈ ಕನಸು ನಿಮಗೆ ತಿಳಿಸುತ್ತಿದೆ ಎನ್ನಬಹುದು. ಒಟ್ಟಾರೆಯಾಗಿ ನಿಮ್ಮ ಕನಸಿನಲ್ಲಿ ಒಳ್ಳೆಯ ನೀರಿನಿಂದ ಸ್ನಾನ ಮಾಡಿದರೆ ಒಳ್ಳೆಯ ಸಂಕೇತ ಕೆಟ್ಟ ನೀರಿನಿಂದ ಸ್ನಾನ ಮಾಡಿದರೆ ಕೆಟ್ಟ ಸಂಕೇತ ಎಂದು ತಿಳಿದುಕೊಳ್ಳಬಹುದು.