ನೌಕರರ ಸಮವಸ್ತ್ರಕ್ಕೆ ಬಿಎಂಟಿಸಿ ನೀಡಿದ ಹಣ ಎಷ್ಟು ಗೊತ್ತಾ….?

ಬೆಂಗಳೂರು

      ಬಸ್ ಚಾಲಕ, ನಿರ್ವಾಹಕ ಹಾಗೂ ಮೆಕ್ಯಾನಿಕ್​​ಗಳಿಗೆ ಈ ಹಿಂದೆ ಬಿಎಂಟಿಸಿ ಯೂನಿಫಾರಂ ಕೊಡುತ್ತಿತ್ತು. ಅದನ್ನು ನೌಕರರು ಹೊಲಿಸಿಕೊಳ್ಳುತ್ತಿದ್ದರು. ಆದರೆ ಈಗ ಯೂನಿಫಾರಂ ಕೊಡುವ ಬದಲು ಬಿಎಂಟಿಸಿ ಕಡಿಮೆ ಹಣ ನೀಡಲು ‌ಮುಂದಾಗಿದೆ. ಕಡಿಮೆ ಹಣ ನೀಡಲು ಮುಂದಾಗಿರುವ ಬಿಎಂಟಿಸಿ ವಿರುದ್ಧ ಸಾರಿಗೆ ಮುಖಂಡರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಂಡಕ್ಟರ್, ಡ್ರೈವರ್​​ಗಳಿಗೆ ಯೂನಿಫಾರಂ ನೀಡಲು ಬಿಎಂಟಿಸಿಯಲ್ಲಿ ಹಣವಿಲ್ಲವೇ ಎಂದು ಸಾರಿಗೆ ನೌಕರರ ಮುಖಂಡರು ಪ್ರಶ್ನೆ ಮಾಡುತ್ತಿದ್ದಾರೆ.

    ಪುಡಿಗಾಸು ನೀಡಿ ಎರಡು ಜೊತೆ ಯೂನಿಫಾರಂ ಹೊಲಿಸಿಕೊಳ್ಳಲು ಹೇಳಿದರೆ ಹೇಗೆ ಎಂದು ನೌಕರರು ಪ್ರಶ್ನೆ ಮಾಡುತ್ತಿದ್ದಾರೆ. ಬಿಎಂಟಿಸಿಯ ಪುರುಷ ಕಂಡಕ್ಟರ್, ಡ್ರೈವರ್ ಗಳಿಗೆ ಹಾಗೂ ಮೆಕ್ಯಾನಿಕ್ ಗಳಿಗೆ ಎರಡು ಜೊತೆ ಯೂನಿಫಾರಂಗೆ ಕೇವಲ 750 ರುಪಾಯಿ, ಸ್ಟೀಚ್ ಮಾಡಲು ಕೇವಲ 350 ರುಪಾಯಿ ನೀಡಿದ್ದಾರೆ. ಅಂಗಡಿಯಲ್ಲಿ ಪುರುಷರ ಒಂದು ಜೊತೆ ಯೂನಿಫಾರಂ ಗಂಜಿ ಬಟ್ಟೆ ಹೊಲಿಸಲು ನಾರ್ಮಲ್- 1350 ರುಪಾಯಿ ಇದೆ (ಮೂರು ಮೀಟರ್). ರೇಮಂಡ್ ಬಟ್ಟೆಗಾದ್ರೆ- 1950 ರುಪಾಯಿ (ಮೂರು ಮೀಟರ್) ಒಂದು ಪ್ಯಾಂಟ್ ಒಂದು ಶರ್ಟ್​​ಗೆ ಇದೆ. ಒಂದು ಜೊತೆ ಪ್ಯಾಂಟ್ ಶರ್ಟ್ ಹೊಲಿಯಲು ಸಾಮಾನ್ಯವಾಗಿ 1400 ಯಿಂದ 1500 ರುಪಾಯಿ ಆಗುತ್ತದೆ. ಇದಕ್ಕೆ ಸಾರಿಗೆ ನೌಕರರ ಮುಖಂಡ ಚಂದ್ರಶೇಖರ್ ಬಿಎಂಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     ಇತ್ತ ಮಹಿಳಾ ಕಂಡಕ್ಟರ್, ಮ್ಯೆಕಾನಿಕ್ ಮಹಿಳೆಯರಿಗೆ 1707 ರುಪಾಯಿ (ಎರಡು ಸೀರೆಗೆ) ಸೀರೆ ಹೊಲಿಗೆ ಹಾಕಲು 100 ರುಪಾಯಿ ನೀಡಿದ್ದಾರೆ. 1800 ರುಪಾಯಿಗೆ ಎರಡು ಸೀರೆ ಎರಡು ಜಾಕೆಟ್ ಹಾಕಿಸಿಕೊಳ್ಳಲು ಹಣ ನೀಡಿದ್ದಾರೆ. ಆದರೆ ಅಂಗಡಿಯಲ್ಲಿ ಒಂದು ಖಾಕಿ ಸೀರೆಗೆ 1500 ರೂ.ನಿಂದ 2000 ರುಪಾಯಿ ಆಗುತ್ತದೆ. ನಾರ್ಮಲ್ ಬೌಸ್ಲ್ ಹೊಲಿಯಲು 300 ರೂ. ತೆಗೆದುಕೊಳ್ಳುತ್ತಾರೆ ದರ್ಜಿಗಳು. ಆದರೆ ಬಿಎಂಟಿಸಿ ಎರಡು ಸೀರೆ ಎರಡು ಬ್ಲೌಸ್​​ಗೆ ಕೇವಲ 1800 ರುಪಾಯಿ ನೀಡಿದೆ. ಇನ್ನು ಸೀರೆ ಉಟ್ಟುಕೊಂಡು ಬಸ್​​ನಲ್ಲಿ ಮಹಿಳಾ ಕಂಡಕ್ಟರ್​​ಗಳು ಕೆಲಸ ಮಾಡಲು ಆಗುವುದಿಲ್ಲ. ಪ್ರತಿದಿನ ಬಸ್​​ನಲ್ಲಿ ಸಾವಿರಾರು ಜನ ಪ್ರಯಾಣಿಕರ ನಡುವೆ ಓಡಾಡಿ ಟಿಕೆಟ್ ನೀಡಬೇಕಾಗುತ್ತದೆ. ಡಿಪೋಗಳಲ್ಲಿ ಮೆಕ್ಯಾನಿಕ್ ಮಹಿಳೆಯರು ಕೂಡ ಸೀರೆಯುಟ್ಟು ಕೆಲಸ ಮಾಡಲು ಆಗುವುದಿಲ್ಲ.

 

Recent Articles

spot_img

Related Stories

Share via
Copy link
Powered by Social Snap