ಅಭಿಮಾನಿಗಳ ಪಾಲಿನ ಡಿ ಬಾಸ್‌ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ….!?

ಬೆಂಗಳೂರು : 

    ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ಇಂಡಸ್ಟ್ರಿ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಸಂಪಾದನೆ ಮಾಡಿದ್ದಾರೆ. ನಟ ದರ್ಶನ್ ದೊಡ್ಡ ಮಟ್ಟದಲ್ಲಿ ಹೆಸರು & ಕೀರ್ತಿ ಎರಡನ್ನೂ ಗಳಿಸಿದ್ದಾರೆ. ಇಂತಹ ಮೇರು ನಟ ಈಗ ಸಂಕಷ್ಟಕ್ಕೆ ಸಿಲುಕಿದ್ದು, ಕೊಲೆ ಆರೋಪ ಎದುರಿಸಿ ಸೆಂಟ್ರಲ್ ಜೈಲ್ ಸೇರುವಂತಾಗಿದೆ.

    ಇದೇ ಸಮಯದಲ್ಲಿ ನಟ ದರ್ಶನ್ ಅವರ ಬಳಿ ಒಟ್ಟು ಎಷ್ಟು ಕೋಟಿ ರೂಪಾಯಿ ಆಸ್ತಿ ಇದೆ? ಎಷ್ಟು ಕೋಟಿ ಬೆಲೆಯ ಕಾರುಗಳು ಇವೆ? ಎನ್ನುವ ಬಗ್ಗೆ ಚರ್ಚೆ ಶುರುವಾಗಿದ್ದು, ಆ ಮಾಹಿತಿ ಇಲ್ಲಿದೆ ಬನ್ನಿ ಮುಂದೆ ಓದಿ ತಿಳಿಯೋಣ.

    ದರ್ಶನ್ ತೂಗುದೀಪ್ ಹೆಸರಿಗೆ ಒಂದು ಗತ್ತು ಇದೆ, ಹಾಗೇ ನಟ ದರ್ಶನ್ ಅವರು ಸಿನಿಮಾ ಮಾಡ್ತಾರೆ ಅಂದ್ರೆ ಹಲವು ವರ್ಷ ಕಾದು ಸಿನಿಮಾ ನೋಡುವ ಅಭಿಮಾನಿ ಬಳಗವೂ ಇದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವುದೇ ಗಾಡ್ ಫಾದರ್ ಇಲ್ಲದೆ ಬೆಳೆದು ನಿಂತ ದರ್ಶನ್ ತೂಗುದೀಪ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಕೂಡ ಇದ್ದಾರೆ. ಹೀಗಿದ್ದಾಗ ನಟನ ತಲೆಯಲ್ಲಿ ಅದೇನು ಬಂತೋ ಗೊತ್ತಿಲ್ಲ, ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ಕೊಲೆಗೈದ ಆರೋಪ ಅವರ ವಿರುದ್ಧ ಕೇಳಿಬಂದಿದೆ. ಇದೇ ಕಾರಣಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ, ನಟ ದರ್ಶನ್ ತೂಗುದೀಪ್ ನರಳುತ್ತಿದ್ದಾರೆ. ಹಾಗಾದರೆ ನಟ ದರ್ಶನ್ ಬಳಿ ಎಷ್ಟು ಕೋಟಿ ರೂಪಾಯಿ ಆಸ್ತಿ ಮತ್ತು ಕಾರುಗಳು ಇವೆ ಗೊತ್ತಾ? ಮಾಹಿತಿ ಇಲ್ಲಿದೆ ಮುಂದೆ ಓದಿ.

    ಕನ್ನಡ ಸಿನಿಮಾ ಲೋಕದಲ್ಲಿ ಕಾಟೇರ, ರಾಬರ್ಟ್, ಯಜಮಾನ, ಸಾರಥಿ ರೀತಿ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ್ದ ದರ್ಶನ್ ತೂಗುದೀಪ್ 2002ರ ಸಮಯದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾ ‘ಮೆಜೆಸ್ಟಿಕ್’ ದರ್ಶನ್ ತೂಗುದೀಪ್ ಅವರ ಬದುಕನ್ನೇ ಬದಲಾಯಿಸಿತು. ಯಾಕಂದ್ರೆ ದರ್ಶನ್ ಅವರಿಗೆ ದೊಡ್ಡ ಗೆಲುವು ತಂದುಕೊಟ್ಟ ಸಿನಿಮಾ ‘ಮೆಜೆಸ್ಟಿಕ್’ ಎನ್ನಬಹುದು. ಹೀಗೆ ಶುರುವಾದ ದರ್ಶನ್ ಅವರ ಸಿನಿಮಾ ಪಯಣ ಈಗ ಪ್ರತಿ ಸಿನಿಮಾಗೆ ಬರೋಬ್ಬರಿ 20 ಕೋಟಿ ರೂಪಾಯಿ ಪಡೆಯುವ ತನಕ ಬಂದು ನಿಂತಿದೆ ಎಂಬ ಮಾತುಗಳು ಗಾಂಧಿ ನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ದರ್ಶನ್ ಅಥವಾ ಅವರ ಕುಟುಂಬದ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಇಲ್ಲ.

   ನಟ ದರ್ಶನ್ ತೂಗುದೀಪ್ ಹೀಗೆ ಒಂದೊಂದು ಸಿನಿಮಾಗೂ, ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ನಟ ದರ್ಶನ್ ತೂಗುದೀಪ್‌ರ ಬಳಿ ಇದೀಗ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇರಬಹುದು ಎನ್ನಲಾಗಿದೆ. ಹಾಗೇ ಅವರ ಕುಟುಂಬದ ಆಸ್ತಿಯನ್ನೂ ಸೇರಿಸಿದರೆ ಅದು ಇನ್ನಷ್ಟು ಕೋಟಿ ಹೆಚ್ಚಾಗುವುದು ಪಕ್ಕಾ. ಆದರೆ ದರ್ಶನ್ ಅವರು ತಮ್ಮ ಒಟ್ಟು ಆಸ್ತಿ ಬಗ್ಗೆ ಎಲ್ಲೂ ಅಧಿಕೃತ ಹೇಳಿಕೆಗಳನ್ನ ನೀಡಿಲ್ಲ. ಹೀಗಾಗಿ ದರ್ಶನ್ ಅವರ ಒಟ್ಟು ಆಸ್ತಿ 100 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜು ಮಾಡುತ್ತಾರೆ ಗಾಂಧಿ ನಗರದ ಜನಗಳು. 

    ಹಾಗೇ ದರ್ಶನ್ ಅವರ ಬಳಿ ಕೋಟಿ ಕೋಟಿ ಬೆಲೆಬಾಳುವ ಕಾರುಗಳ ರಾಶಿಯೇ ಇದ್ದು, ಆ ಲೆಕ್ಕಾಚಾರದಲ್ಲಿ ನಟ ದರ್ಶನ್ ಅವರ ಬಳಿ ಜಾಗ್ವಾರ್ ಎಕ್ಸ್‌ಕೆಆರ್-ಎಸ್, ಲ್ಯಾಂಬೋರ್ಗಿನಿ ಅವೆಂಟಡಾರ್ ಸ್ಪೈಡರ್‌ಗೆ, ಲ್ಯಾಂಬೋರ್ಗಿನಿ ಉರುಸ್ (ಪುನೀತ್ ರಾಜ್‌ಕುಮಾರ್ ಅವರ ಬಳಿ ಇರುವ ಕಾರು) ಆಡಿ ಕ್ಯೂ7, ಲ್ಯಾಂಡ್ ರೋವರ್ ಡಿಫೆಂಡರ್, ಫೋರ್ಡ್ ಮಸ್ಟಾಂಗ್ ಸೇರಿದಂತೆ ಪೋರ್ಷೆ ಕಯೆನ್ನೆ, ಟೊಯೊಟಾ ವೆಲ್‌ಫೈರ್, ಮಿನಿ ಕೂಪರ್ ಕಂಟ್ರಿಮ್ಯಾನ್, ಟೊಯೊಟಾ ಫಾರ್ಚೂನರ್, ಜೀಪ್ ರಾಂಗ್ಲರ್, ಬಿಎಂ ಡಬ್ಲ್ಯೂ-5 ಕಾರುಗಳು ಸೇರಿ ಹಲವು ಐಷಾರಾಮಿ ಹಾಗೂ ಕೋಟಿ ಕೋಟಿ ಬೆಲೆಬಾಳುವ ಕಾರುಗಳು ಇವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link