ಬೆಂಗಳೂರು:
ಆಡಳಿತ ವ್ಯವಸ್ಥೆ ಹಾಗೂ ಬೇರೆ ಬೇರೆ ಕಾರಣಗಳಿಂದ ನಿಲ್ಲಿಸಲಾಗುತ್ತಿದೆ ಹೊರತು, ಗ್ಯಾರಂಟಿ ಯೋಜನೆ ನೀಡುವ ಅಗತ್ಯವಿಲ್ಲ.
ಜುಲೈ ತಿಂಗಳ ಪೊಲೀಸ್ ಇಲಾಖೆ ಸಿಬ್ಬಂದಿ ವೇತನ ವಿಳಂಬ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್, ಪೊಲೀಸ್ ಸಿಬ್ಬಂದಿಗಳ ಸಂಬಳ ತಡೆದು ಗ್ಯಾರಂಟಿ ಯೋಜನೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು.
ಯಾವುವೋ ಕಾರಣಕ್ಕೆ ಯಾದಗಿರಿ ಎಸ್ಪಿ ಸಂಬಳ ನಿಲ್ಲಿಸಿರಬಹುದು. ಗ್ಯಾರಂಟಿ ಯೋಜನೆಗೆ ಬೇಕಾದ ಹಣವನ್ನು ಬಜೆಟ್ನಲ್ಲಿ ಇಟ್ಟಿದ್ದಾರೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಾಗಿ ಪೊಲೀಸ್ ಸಿಬ್ಬಂದಿ ಸಂಬಳ ನಿಲ್ಲಿಸಿಲ್ಲ. ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಲಾಗಿದೆ. ಸ್ಥಳೀಯ ಶಾಸಕರು, ನಾಯಕರಿಂದಲೂ ಕೆಲವು ಆಕ್ಷೇಪ ಬಂದಿತ್ತು. ಹೀಗಾಗಿ ತಡೆಹಿಡಿಯಲಾಗಿದೆ, ಎಚ್ಚರಿಕೆಯಿಂದ ವರ್ಗಾವಣೆ ಮಾಡುತ್ತೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ